ಲಂಡನ್: ಸಿರಿಯಾದಲ್ಲಿ ಕಾದಾಡುತ್ತಿರುವ ಇಸ್ಲಾಮಿಕ್ ಬಂಡುಕೋರರ ಕಾಮನೆಗಳನ್ನು ತಣಿಸುವ ಸಲುವಾಗಿ ನೂರಾರು ಯುವತಿಯರನ್ನು ಅಪಹರಿಸಲಾಗುತ್ತಿದೆಯಲ್ಲದೇ ವಿವಾಹಕ್ಕೆ ಒಪ್ಪದವರನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದನ್ನು ಸಮೀಕ್ಷೆಯೊಂದು ಹೊರಗಡೆವಿದೆ.
ಇಸ್ಲಾಮಿಕ್ ರಾಷ್ಟ್ರಕ್ಕಾಗಿ ಕಾದಾಡುತ್ತಿರುವ ಈ ಉಗ್ರರನ್ನು ವಿವಾಹವಾಗಲು ಕೆಲವು ಯುವತಿಯರು ಸ್ವ ಇಚ್ಚೆಯಿಂದ ತೆರಳುತ್ತಿದ್ದು, ಹಲವಾರು ಮಂದಿಯನ್ನು ಅಪಹರಿಸಿಕೊಂಡು ಹೋಗಲಾಗುತ್ತಿದೆ ಎಂಬಂಶವನ್ನು ಸಮೀಕ್ಷೆ ತಿಳಿಸಿದೆ.
ಈ ಯುವತಿಯರನ್ನು ವಿವಾಹವಾಗುತ್ತಿರುವ ಉಗ್ರರು ಅವರು ಹೊರ ಪ್ರಪಂಚಕ್ಕೆ ಕಾಣದಂತೆ ಕಟ್ಟುನಿಟ್ಟಿನ ನಿಗಾ ಇಡುತ್ತಿದ್ದಾರೆ. ಅಲ್ಲದೇ ತಮ್ಮ ಧರ್ಮ ಯುದ್ದಕ್ಕೆ ನೀವುಗಳೂ ಈ ರೀತಿ ಸೇವೆ ಸಲ್ಲಿಸಬಹುದೆಂಬುದನ್ನು ತಿಳಿಸುತ್ತಾರೆ.
ಅಶ್ಚರ್ಯಕರ ಸಂಗತಿಯೆಂದರೆ ಕೆಲವು ಯುವತಿಯುರು ಟ್ವೀಟರ್ ನಲ್ಲಿ ತಮ್ಮ ಫೋಟೊಗಳನ್ನು ಹಾಕಿ ತಾವು ಉಗ್ರರೊಂದಿಗೆ ವಿವಾಹವಾಗಲು ಸಿದ್ದ ಎಂದು ತಿಳಿಸುತ್ತಿದ್ದಾರೆ. ಈ ರೀತಿ ಆಯ್ಕೆಯಾದ ಯುವತಿಯರನ್ನು ರಹಸ್ಯ ಮಾರ್ಗದಲ್ಲಿ ಸಿರಿಯಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಉಗ್ರರೊಂದಿಗೆ ವಿವಾಹ ಮಾಡಿಸಲಾಗುತ್ತಿದೆ.
ಅಲ್ಲದೇ ಶಸ್ತ್ರಸಜ್ಜಿತ ಹೋರಾಟದಲ್ಲಿ ಪಾಲ್ಗೊಳ್ಳಬಯಸುವ ಯುವತಿಯರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನೂ ಉಗ್ರ ಸಂಘಟನೆ ಮಾಡಿದೆ ಎನ್ನಲಾಗಿದೆ.