ನನಗೆ ಯಾರೊಂದಿಗೂ ಡೇಟಿಂಗ್ ಇಲ್ಲ. ಯಾರೊಂದಿಗಾದರೂ ನಾನು ಒಟ್ಟಿಗೆ ಕೆಲಸ ಮಾಡಿದರೆ ಅದನ್ನು ಡೇಟಿಂಗ್ ಅನ್ನೋಕಾಗುತ್ತಾ..? ಎಂದು ತನ್ನದೇ ಆದ ಸ್ಟೈಲಿನಲ್ಲಿ ಉಲಿದವಳು ಮತ್ತಾರೂ ಅಲ್ಲ, ಅಭಿಮಾನಿಗಳ ನಿದ್ದೆಗೆಡಿಸಿದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ.!
ತನ್ನೊಂದಿಗೆ ನಟಿಸಿದ ನಟರ ಜೊತೆ ಪ್ರಣಯ ಸಂಬಂಧ ಇದೆ ಎಂಬ ವದಂತಿಗಳು ಪುಂಖಾನುಪುಂಖವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸೋನಾಕ್ಷಿ ಸಿನ್ಹಾ, ನಾವು ಒಟ್ಟಿಗೆ ಕೆಲಸ ಮಾಡಿದಾಕ್ಷಣ ಅಥವಾ ಒಟ್ಟಿಗೆ ಸಿನೆಮಾ ನೋಡಿದಾಕ್ಷಣ ವೈಯಕ್ತಿಕ ಜೀವನದಲ್ಲಿ ಸಂಬಂಧ ಹೊಂದಿದ್ದೇವೆ ಎಂದಲ್ಲ, ವೈಯಕ್ತಿಕ ಜೀವನವೇ ಬೇರೆ. ವೃತ್ತಿಯೇ ಬೇರೆ ಎಂದು ಹುಬ್ಬು ಹಾರಿಸಿದ್ದಾಳೆ.
ತನ್ನ ಕುರಿತು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಉತ್ತರಿಸಿರುವ ಸೋನಾಕ್ಷಿ, ನಾನು ಎಂದಿಗೂ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆ ಕುರಿತು ಯಾರು ಬರೆದಿದ್ದಾರೋ ಅವರನ್ನೇ ಕೇಳಿ ಎಂದಿದ್ದಾರಲ್ಲದೇ, ಒಟ್ಟಿಗೆ ಕೆಲಸ ಮಾಡಿದಾಕ್ಷಣ ಅಥವಾ ಒಟ್ಟಿಗೆ ಸಿನಿಮಾ ನೋಡಿದಾಕ್ಷಣ ನಾವು ಸಂಬಂಧದಲ್ಲಿದ್ದೇವೆ ಎಂಬ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದ್ದಾಳೆ.