ರಾಷ್ಟ್ರೀಯ

ಮೊಬೈಲ್ ನಂಬರ್ ಪೋರ್ಟಬಲಿಟಿ ಮಾಡಿಸಿಕೊಳ್ಳುವವರಿಗೊಂದು ಖುಷಿ ಸುದ್ದಿ

Pinterest LinkedIn Tumblr

5962mobile-phone-smartphone-texನವದೆಹಲಿ: ಮೊಬೈಲ್ ನಂಬರ್ ಪೋರ್ಟಬಲಿಟಿ ಮಾಡಿಕೊಳ್ಳಬಯಸುವ ಗ್ರಾಹಕರಿಗೊಂದು ಖುಷಿ ಸುದ್ದಿ ಇಲ್ಲಿದೆ. ಇನ್ನು ಮುಂದೆ ಯಾವುದೇ ರಾಜ್ಯದ ನಂಬರ್ ಇದ್ದರೂ ಮತ್ತೊಂದು ರಾಜ್ಯಕ್ಕೆ ಹೋದ ವೇಳೆ ಹಳೆಯ ನಂಬರನ್ನೇ ಉಳಿಸಿಕೊಳ್ಳಬಹುದಾಗಿದೆ.

ಈ ಹಿಂದೆ ಮೊಬೈಲ್ ನಂಬರ್ ಪೋರ್ಟಬಲಿಟಿ ಸೌಲಭ್ಯ ಆಯಾ ರಾಜ್ಯಗಳಲ್ಲಿನ ನೆಟ್ ವರ್ಕ್ ಆಪರೇಟರನ್ನು ಬದಲಾಯಿಸುವಾಗ ಹಳೆಯ ಮೊಬೈಲ್ ನಂಬರನ್ನೇ ಬಳಸಬಹುದಾಗಿತ್ತು. ಹೊರ ರಾಜ್ಯಕ್ಕೆ ವಾಸಿಸಲು ಹೋದಾಗ ಅದೇ ರಾಜ್ಯದ ಸಿಮ್ ಖರೀದಿಸಬೇಕಾಗಿತ್ತು.

ಆದರೆ ಜುಲೈ 3 ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮದಿಂದಾಗಿ ಉದಾಹರಣೆಗೆ ಚೆನ್ನೈನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮತ್ತೆ ಕರ್ನಾಟಕಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದಾಗ ಈ ಹಿಂದೆ ಚೆನ್ನೈನಲ್ಲಿ ಹೊಂದಿದ್ದ ಮೊಬೈಲ್ ನಂಬರನ್ನೇ ಕರ್ನಾಟಕದ ನೆಟ್ ವರ್ಕ್ ಅಪರೇಟರ್ ಮೂಲಕ ಉಳಿಸಿಕೊಳ್ಳಬಹುದಾಗಿದೆ.

Write A Comment