ಮಂಗಳೂರು,ಜುಲೈ.01: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ, ಬಿಜೆಪಿಯ ಕಾರ್ಯಕರ್ತ ಕೆ.ಮೋಹನದಾಸ ವೆಂಕಟೇಶ ಬಾಳಿಗ (ಬಾಳ ಮಾಮ್) ಇವರು ತಮ್ಮ 74ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸ್ವಸ್ಥದಿಂದ ಪ್ರತಾಪನಗರದ ಸ್ವಗೃಹದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
1975 ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ‘ಮೀಸಾ’ ಬಂಧನವನ್ನು ಅನುಭವಿಸಿದ್ದ ಅವರು ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದರು. ಮೃತರ ನಿಧನಕ್ಕೆ ಸಂಘದ ಪ್ರಮುಖರಾದ ಡಾ| ಪಿ.ವಿ.ಶೆಣೈ, ಬಿಜೆಪಿ ಪ್ರಮುಖರಾದ ಸಂಸದ ನಳಿನ್ ಕುಮಾರ್ ಕಟೀಲು, ಎನ್.ಯೋಗೀಶ್ ಭಟ್, ಕ್ಯಾ|ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಪ್ರತಾಪಸಿಂಹ ನಾಯಕ್, ಸಂಜೀವ ಮಠಂದೂರು, ಕಿಶೋರ್ ರೈ, ಸತೀಶ್ ಪ್ರಭು, ರವಿಶಂಕರ್ ಮಿಜಾರ್, ವೇದವ್ಯಾಸ ಕಾಮತ್, ಸುಧೀರ್ ಶೆಟ್ಟಿ ಕಣ್ಣೂರು, ಜಯಂತಿ ಆಚಾರ್ ಮುಂತಾದ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದರು
