ರಾಷ್ಟ್ರೀಯ

ಲಾಕರ್ ನಲ್ಲಿಟ್ಟಿದ್ದ ಚಿನ್ನ ಹಿತ್ತಾಳೆಯಾದ ಕಥೆ !

Pinterest LinkedIn Tumblr

40680ಮನೆಗಳಲ್ಲಿ ಚಿನ್ನದ ಆಭರಣ ಕಾಣೆಯಾಗುವುದನ್ನು ನೋಡಿದ್ದೀರಿ. ಇನ್ನು ಆಭರಣಗಳ ಮಳಿಗೆಯಲ್ಲಿಯೂ ಬಂಗಾರದ ದರೋಡೆಯಾಗಿದ್ದನ್ನು ಕೇಳಿದ್ದೀರಿ. ಆದರೆ ಇದೀಗ ಕಳ್ಳ ಸಾಗಣೆಗಾರರಿಂದ ವಶಪಡಿಸಿಕೊಂಡ ಚಿನ್ನವನ್ನು ಇರಿಸಿದ್ದ ಲಾಕರ್ ನಲ್ಲಿದ್ದ ಚಿನ್ನವೇ ಮಂಗಮಾಯವಾಗಿದೆ.

ಹೌದು. ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲಿ ಈ ಘಟನೆ ನಡೆದಿದ್ದು ಹಲವು ಪ್ರಕರಣಗಳಲ್ಲಿ ಕಳ್ಳ-ಸಾಗಣೆದಾರರಿಂದ ವಶಪಡಿಸಿಕೊಂಡ 11 ಕೆಜಿ ಚಿನ್ನವನ್ನು ಸೀಮಾ ಸುಂಕಾಧಿಕಾರಿಗಳು ಬಿಗಿ ಭದ್ರತೆಯ ಲಾಕರ್‌ನಲ್ಲಿ ಸೀಲ್ ಮಾಡಿ ಇಟ್ಟಿದ್ದರು. ಹೀಗೆ ಸೀಲ್ ಮಾಡಲಾದ ಚಿನ್ನವನ್ನು ನಿಯಮದಂತೆ  ಇಲಾಖಾ ಸಮಿತಿ ಮುಂದೆ ತಪಾಸಣೆಗಾಗಿ ತೆರೆದು ನೋಡಿದಾಗ ಆಘಾತ ಕಾದಿತ್ತು. ಇಟ್ಟಿದ್ದ 11 ಕೆಜಿ ಚಿನ್ನದ ಪೈಕಿ ಕೇವಲ 8 ಕೆಜಿ ಮಾತ್ರವಿತ್ತು. ಅಷ್ಟೇ ಅಲ್ಲ, ಆ ಎಂಟು ಕೆ .ಜಿ ಚಿನ್ನವೂ ಸಹ ನಕಲಿ ಎಂಬುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಭದ್ರತಾ ಕೊಠಡಿಯಲ್ಲಿಟ್ಟಿದ್ದ ಚಿನ್ನ ಹೀಗೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಇದೀಗ ದೆಹಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

Write A Comment