ರಿಂಗ್‌ರೋಡ್’ ರೆಡಿ ಹಲವು ತೊಂದರೆಗಳ ನಡುವೆಯೂ ಸಹ ರಿಂಗ್‌ರೋಡ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಟೈಟಲ್ ವಿಚಾರವಾಗಿ ರಿಂಗ್‌ರೋಡ್ ಶುಭ ಎಂದು ಆರಂಭಗೊಂಡು ನಂತರ ರಿಂಗ್‌ರೋಡ್ ಸುಮಾ ಆಗಿ ಈಗ ರಿಂಗ್‌ರೋಡ್ ಆಗಿದೆ. ಅಡಿಬರಹದಲ್ಲಿ ಸುಮಾಳ ಕಥೆ ಎಂದು, ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಸೆನ್ಸಾರ್ ಮಂಡಳಿಯಿಂದ ಅರ್ಹತಾ ಪತ್ರ ಪಡೆದಿದ್ದು, ರಿಂಗ್‌ರೋಡ್ ಎಂದು ಮಾತ್ರ ನೀಡಲಾಗಿದೆ. ಈ ಎಲ್ಲ ಗೊಂದಲಕ್ಕೂ ಚಿತ್ರತಂಡ ಏನು ಮಾಡಲಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ರಿಂಗ್‌ರೋಡ್ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆ. ಈಗ ಬಹಾರ್ ಫಿಲ್ಮ್ಸ್ ಅವರಿಂದ ರಾಜ್ಯಾದ್ಯಂತ ತೆರೆಯ ಮೇಲೆ ಬರಲಿದೆ. ಖುಷಿ ಚಿತ್ರದ ಟೈಟಲ್ ಪಾತ್ರ ಮಾಡುತ್ತಿದ್ದಾರೆ. ದುನಿಯ ವಿಜಯ್, ನಿಕಿತ ತುಕ್ರಲ್ ಜತೆಗೆ ಅತಿಥಿ ಪಾತ್ರದಲ್ಲಿ ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಸಂಜನಾ, ಪಟ್ರೇ ಅಜಿತ್ ಇದ್ದಾರೆ. ಪ್ರಿಯ ಬೆಳ್ಳಿಯಪ್ಪ ಅವರು ನಿರ್ದೇಶಕರು. ನಿರ್ಮಾಪಕರು ರಜನಿ ರವೀಂದ್ರ ದಾಸ್,
ರೇಖಾರಾಣಿ ಅವರ ಸಂಭಾಷಣೆ, ವಾಣಿ ಹರಿಕೃಷ್ಣ ಅವರ ಸಂಗೀತ, ರೇಶ್ಮಿ ಸರ್ಕಾರ್ ಛಾಯಾಗ್ರಹಣ, ಶಿಲ್ಪಾ ಕೃಷ್ಣಾ ವಸ್ತ್ರಲಂಕಾರ, ಎಂ.ಡಿ ಸೌಜ ಸಂಕಲನ, ಚಿತ್ರಲೇಖ ಶೆಟ್ಟಿ ಅವರ ಕಲಾ ನಿರ್ದೇಶನ, ಅವಂತಿಕ ನಿಂಬಲ್ಕರ್ ಅವರ ಶಬ್ದಗ್ರಹಣ, ಹೇಮ ಬಿ ಎನ್ ಸೌಂಡ್ ಎಂಜಿನಿಯರ್, ಗೀತಾ ಗುರಪ್ಪ ಡಿಟಿಎಸ್ ಲೇಪನ, ದೇವಾಂಶಿ ದೇಸಾಯಿ ಅವರ ಕಲರಿಂಗ್, ಪೂನಂ ಪ್ರಸಾದ್ ಮೇಕಪ್, ಸುಮನ ತ್ಯಾಗಿ ಕೇಶಾಲಂಕಾರ, ಸೋನಮ್ ತಲೆ ಡಿಸೈನ್, ಚಂದ್ರಿಕ, ಜೀವಿತ ವಿಶ್ವನಾಥ್ ಅವರ ನೃತ್ಯ ನಿರ್ದೇಶನ, ಮೆಹಿ ಷಾ ಹಾಗೂ ಅವಿಷ ಬೈಂಗ್ ಸ್ಥಿರ ಚಿತ್ರಣ, ಅಭೇರಿ ಡಿ ಮುಖ್ಯ ಸಹಾಯಕ ಛಾಯಾಗ್ರಾಹಕರು, ಸ್ವಪನೀಲ್ ನಿಯೋಗಿ ಮುಖ್ಯ ಸಹಾಯಕ ನಿರ್ದೇಶಕಿ ಆಗಿ ಕೆಲಸ ನಿರ್ವಹಿಸಿದ್ದಾರೆ. ಈ ರಿಂಗ್‌ರೋಡ್ ಹಾದಿಗೆ ಯಾವ ಅಡೆತಡೆಯೂ ಬರದಿದ್ದರೆ ಮುಂದಿನ ತಿಂಗಳು ತೆರೆ ಮೇಲೆ ಸರಾಗವಾಗಿ ಸಂಚರಿಸಲಿದೆ.