ಜಾರ್ಜಿಯಾ, ಜೂ. 18: ಇಲ್ಲಿನ ಮೃಗಾಲಯದಿಂದ ತಪ್ಪಿಸಿಕೊಂಡು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಹುಲಿಯನ್ನು ಸ್ಥಳೀಯ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಜಾರ್ಜಿಯಾದಲ್ಲಿರುವ ರಾಜಧಾನಿ ಟಬ್ಲಿಸಿ ಮೃಗಾಲಯದಿಂದ ತಪ್ಪಿಸಿಕೊಂಡ ಹುಲಿ, ವ್ಯಕ್ತಿಯೊಬ್ಬನ ಮೇಲೆ ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿ, ಬಳಿಕ ಆಸ್ಪತ್ರೆಗೆ ದಾಖಲಾದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಮೇಲೆ ದಾಳಿ ಮಾಡಿ ಕಾರ್ಖಾನೆಯೊಂದರಲ್ಲಿ ಅವಿತುಕುಳಿತಿದ ಹುಲಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಜಾರ್ಜಿಯಾದಲ್ಲಿ ಉಂಟಾಗುತ್ತಿರುವ ಪ್ರವಾಹದಿಂದ ಮೃಗಾಲಯದಲ್ಲಿದ್ದ ಪ್ರಾಣಿಗಳು ಭಯಭೀತಿಗೊಂಡು ಅಲ್ಲಿಂದ ಪರಾರಿಯಾಗುತ್ತಿದ್ದು, ಅವುಗಳ ರಕ್ಷಣೆ ಕುರಿತು ಇದೀಗ ಸ್ಥಳೀಯ ಸರಕಾರಕ್ಕೆ ತೀವ್ರ ತಲೆ ಬಿಸಿಯಾಗಿದೆ.
