ಇಂದಿನ ಯುವಕರ ಮೊದಲ ಆದ್ಯತೆ ಸ್ಮಾರ್ಟ್ ಫೋನ್ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಕೆಲವೊಮ್ಮೆ ಹಣಕಾಸಿನ ಸಮಸ್ಯೆ ಸ್ಮಾರ್ಟ್ ಫೋನ್ ಕೊಳ್ಳುವ ಆಸೆ ಕನಸಾಗಿಯೇ ಉಳಿಯುತ್ತದೆ. ಆದರೆ ಇನ್ನು ಅದಕ್ಕಾಗಿ ಚಿಂತಿಸಬೇಕಿಲ್ಲ. ಏಕೆ ಅಂತೀರಾ ಈ ಸ್ಟೋರಿ ಓದಿ.
ಹೌದು. ಮುಕೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್ ಟೆಲಿಕಾಂ ಅಂಗವಾದ ರಿಲಯನ್ಸ್ ಜಿಯೋ ಈ ವರ್ಷದ ಡಿಸೆಂಬರ್ನಲ್ಲಿ ಬಹುನಿರೀಕ್ಷಿತ 4ಜಿ ಸೇವೆಗಳನ್ನು ಆರಂಭಿಸಲಿದ್ದು ವಿವಿಧ ಹ್ಯಾಂಡ್ ಸೆಟ್ ತಯಾರಕರ ಜೊತೆ ಸಹಯೋಗದಿಂದ 4 ಜಿ ಬೆಂಬಲಿತ ಸ್ಮಾರ್ಟ್ಫೋನ್ಗಳನ್ನು 4000ರೂ.ಗಿಂತ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುತ್ತೇವೆ ಎಂದು ಅಂಬಾನಿ ಸ್ಪಷ್ಟಪಡಿಸಿದ್ದಾರೆ.
ಎಲ್ಟಿಇ ತಂತ್ರಜ್ಞಾನ ಬಳಸಿಕೊಂಡು 800 ಎಂಎಚ್z, 1800 ಎಂಎಚ್z ಮತ್ತು 2300ಎಂಎಚ್z ಬ್ಯಾಂಡ್ಗಳಲ್ಲಿ ರಿಲಯನ್ಸ್ ಜಿಯೋ 4ಜಿ ಸೇವೆಗಳನ್ನು ಒದಗಿಸಲು ಯೋಜನೆ ರೂಪಿಸಿದ್ದು ಈ ಮೂಲಕ ರಿಲಯನ್ಸ್ ಜಿಯೊ ಟೆಲಿಕಾಂ ಉದ್ಯಮದಲ್ಲಿ 70,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದು ಆ ಮೂಲಕ ಪ್ರತಿಯೊಬ್ಬ ಭಾರತೀಯರ ಕೈನಲ್ಲಿಯೂ ಸ್ಮಾರ್ಟ್ ಫೋನ್ ಇರಬೇಕೆಂಬುದೇ ನಮ್ಮ ಉದ್ದೇಶ ಎಂದು ವಿವರಿಸಿದ್ದಾರೆ.