ಅಂತರಾಷ್ಟ್ರೀಯ

ಈಗ ಫೇಸ್‌ಬುಕ್ ಮಾಹಿತಿ ಕಳ್ಳತನ…

Pinterest LinkedIn Tumblr

facebook

ನವದೆಹಲಿ, ಜೂ.9: ಜೋಕೆ…….. ಫೇಸ್‌ಬುಕ್‌ನಿಂದ `ಅನ್‌ಫ್ರೆಂಡ್` ಆದವರೂ ಕೂಡ ನಿಮ್ಮ ಪ್ರಮುಖ ಮಾಹಿತಿಗಳನ್ನು ಕದಿಯಬಹುದು ಎಂದು ತಂತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಯುವಜನತೆಯನ್ನು ಬಹುವಾಗಿ ಆಕರ್ಷಿಸುತ್ತಿರುವ ಫೇಸ್‌ಬುಕ್‌ನಲ್ಲಿ ನೀವು ಮೊದಲು ಇಷ್ಟಪಟ್ಟು ಸ್ನೇಹಿತರಾಗಿ ಮಾಡಿಕೊಂಡಿರಬಹುದು. ಆದರೆ ಕೆಲ ದಿನದ ಬಳಿಕ ಅವರನ್ನು ಅನ್‌ಫ್ರೆಂಡ್ ಮಾಡಿರುತ್ತೀರಿ. ಆದರೂ ಅವರು ನಿಮ್ಮ ಖಾತೆಯಲ್ಲಿರುವ ಪ್ರಮುಖ ಮಾಹಿತಿಯನ್ನೆಲ್ಲಾ ಕದಿಯಬಹುದು ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೇಸ್‌ಬುಕ್ ಖಾತೆ ಬಳಕೆದಾರರು ದುರುದ್ದೇಶಪೂರಿತ ಸೇವೆಯುಳ್ಳ ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಂಡು ಖಾತೆ ನಿರ್ವಹಿಸಿ ಮಾಹಿತಿ ಕಸಿಯುವುದನ್ನು ತಪ್ಪಿಸಬಹುದು ಎಂದು ತಂತ್ರಜ್ಞರು ಸಲಹೆ ನೀಡುತ್ತಾರೆ.

Write A Comment