ರಾಷ್ಟ್ರೀಯ

ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತ : ಕರ್ನಾಟಕ, ಮಹಾರಾಷ್ಟ್ರ ಹೈ ಅಲರ್ಟ್

Pinterest LinkedIn Tumblr

WETHER--ALERT

ನವದೆಹಲಿ,ಜೂ.8- ಅರಬ್ಬಿ ಸಮುದ್ರದಲ್ಲಿ ಭಾರೀ ಬಲಿಷ್ಠವಾದ ಚಂಡ ಮಾರುತ ಕೇಂದ್ರಿತವಾಗಿದ್ದು, ಸಂಪೂರ್ಣ ಕಟ್ಟೆಚ್ಚರದಿಂದಿರುವಂತೆ ಕೇಂದ್ರ ಹವಾಮಾನ ಇಲಾಖೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ಮುನ್ನೆಚ್ಚರಿಕೆ ಸೂಚನೆ ರವಾನಿಸಿದೆ.  ಮುಂಬೈನಿಂದ 550 ಕಿ.ಮೀ ಅಂತರದಲ್ಲಿ ಪಶ್ಚಿಮ ಆಗ್ನೇಯ ದಿಕ್ಕಿನಲ್ಲಿ 17.7 ಡಿಗ್ರಿ

ಉತ್ತರ ಹಾಗೂ 67.7 ಡಿಗ್ರಿ ಪೂರ್ವಕ್ಕೆ ಈ ಪ್ರಬಲ ಚಂಡ ಮಾರುತವು ಕೇಂದ್ರೀಕೃತಗೊಂಡಿದೆ ಎಂದು ತಿಳಿಸಿರುವ ಅಧಿಕಾರಿಗಳು, ಈ ಬಿರುಗಾಳಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಭಾರತ ಕರಾವಳಿಯತ್ತ ಚಲಿಸುತ್ತಿದೆ ಎಂದು ಹೇಳಿದ್ದಾರೆ.  ಅಲ್ಲದೆ ಇದು ಉಷ್ಣವಲಯದ ಚಂಡಮಾರುತವಾಗಿದೆ ಎಂದು ವಿಶ್ವದ ಹವಾಮಾನ ತಜ್ಞರು ಹೇಳುತ್ತಿದ್ದರಾದರೂ ಭಾರತೀಯ ಹವಾಮಾನ ಇಲಾಖೆ ಅದನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ.
ಭಾರತದತ್ತ ಸಾಗುವುದಕ್ಕಿಂತಲೂ ವೇಗವಾಗಿ ಓಮನ್ ಮತ್ತು ಪರ್ಷಿದಯನ್ ಕೊಲ್ಲಿ ರಾಷ್ಟ್ರಗಳತ್ತ ಚಲಿಸುತ್ತಿದೆ.

Write A Comment