ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನಾಡಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ವಿಜಯದ ಕನಸಿನೊಂದಿಗೆ ಸೋಮವಾರ ಢಾಕಾ ತಲುಪಿದೆ.
ಕರ್ನಾಟಕದ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಟೆಸ್ಟ್ ತಂಡದಲ್ಲಿ ಇದ್ದರಾದರೂ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಹೊರಗಿಡಲಾಗಿದ್ದು ಒಟ್ಟಾರೆ 14 ಮಂದಿ ಸದಸ್ಯರ ತಂಡ ಕೋಲ್ಕತ್ತಾದಿಂದ ಹೊರಟು ಢಾಕಾ ತಲುಪಿದ್ದು, ಸರಣಿಗೂ ಮುನ್ನ ಅಭ್ಯಾಸ ಪಂದ್ಯಗಳನ್ನಾಡಲಿದ್ದಾರೆ.
ಅಲ್ಲದೇ ಫತುಲ್ಹಾನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಕೊಹ್ಲಿಗೆ ಪೂರ್ಣಪ್ರಮಾಣದ ನಾಯಕನಾಗಿ ಎದುರಿಸುತ್ತಿರುವ ಮೊದಲ ಟೆಸ್ಟ್ ಪಂದ್ಯವಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿಯೂ ಸಾಕಷ್ಟು ಕುತೂಹಲ ಮೂಡಿದೆ. ಅಷ್ಟೇ ಅಲ್ಲ, ಹಲವು ದಿನಗಳಿಂದ ಟೀಂ ಇಂಡಿಯಾದಿಂದ ದೂರವಿದ್ದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಗೂ ಸಹ ಇದು ಮಹತ್ವದ ಪಂದ್ಯವಾಗಿದ್ದು ತಮ್ಮ ಸ್ಪಿನ್ ಮೋಡಿಯ ಮೂಲಕ ಮತ್ತೆ ಬಿಸಿಸಿಐ ನ ಮನಗೆಲ್ಲಲು ಯಶಸ್ವಿಯಾಗುತ್ತಾರಾ ಕಾಯ್ದು ನೋಡ ಬೇಕಿದೆ.
