ಅಂತರಾಷ್ಟ್ರೀಯ

ಚೀನಾದಲ್ಲಿ ಭೀಕರ ದುರಂತ: ಚಂಡಮಾರುತಕ್ಕೆ ಪ್ರಯಾಣಿಕ ಬೋಟ್ ಮುಳುಗಿ 450 ಮಂದಿ ಕಣ್ಮರೆ

Pinterest LinkedIn Tumblr

China Boat Sinks

ಬೀಜಿಂಗ್, ಜೂ.2: ಸುಮಾರು 500 ಜನರಿದ್ದ ಪ್ರಯಾಣಿಕರ ಹಡಗೊಂದು ಬಿರುಗಾಳಿಗೆ ಸಿಕ್ಕಿ ಮುಳುಗಿದ್ದು,, 400ಕ್ಕೂ ಹೆಚ್ಚು ಜನ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಈ ನತದೃಷ್ಟ ಯಾತ್ರಾರ್ಥಿಗಳ ಹಡಗಿನಲ್ಲಿ ಬಹುತೇಕ ವಯಸ್ಸಾದವರೇ ಅಧಿಕ ಸಂಖ್ಯೆಯಲ್ಲಿದ್ದರು. ಸಿಬ್ಬಂದಿ ಸೇರಿದಂತೆ 458 ಜನ ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೀಸಿದ ಚಂಡಮಾರುತಕ್ಕೆ ಸಿಲುಕಿದ ಹಡಗು ಯಾಂಗ್‌ಷೇ ನದಿಯಲ್ಲಿ ಮುಳುಗಿ ಹೋಯಿತು. ಇಬ್ಬರು ಸಿಬ್ಬಂದಿ ಸೇರಿದಂತೆ ಇದುವರೆಗೆ 20 ಜನರನ್ನು ರಕ್ಷಿಸಲಾಗಿದ್ದು ಉಳಿದ 4438 ಜನರ ಗತಿ ಏನಾಯಿತೆಂದು ತಿಳಿದುಬಂದಿಲ್ಲ.

ಸೋಮವಾರ ರಾತ್ರಿ 458 ಜನರಿದ್ದ ಹಡಗು, ಪೂರ್ವ ಚೀನಾದ ರಾಜಧಾನಿ ನಾಂಜಿಂಗ್‌ನಿಂದ ಚೊಂಗ್‌ಕಿಂಗ್ ನಗರಕ್ಕೆ ಹೊರಟಿತ್ತು. ರಾತ್ರಿ 9.30ರ ಸುಮಾರಿನಲ್ಲಿ ಇದ್ದಕ್ಕಿದ್ದ ಹಾಗೆ ಭಯಂಕರ ಬಿರುಗಾಳಿ ಬೀಸಿ ಕೇವಲ ಎರಡೇ ನಿಮಿಷದಲ್ಲಿ 50 ಅಡಿ ಆಳಕ್ಕೆ ಮುಳುಗಿತು. ಅಪಘಾತದ ಬಗ್ಗೆ ಸಂದೇಶ ರವಾನಿಸಲೂ ಸಾಧ್ಯವಾಗಲಿಲ್ಲ ಎಂದು ರಕ್ಷಿಸಲ್ಪಟ್ಟ ಸಿಬ್ಬಂದಿ ಹೇಳಿದ್ದಾರೆ.

China Boat Sinks12

China Boat Sinks1

ಮುಳುಗಿರುವ ಹಡಗಿನಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಪ್ರಧಾನಿ ಲೀ ಕಿಯಾಂಗ್ ಹೇಳಿದ್ದಾರೆ. ಹಲವು ಹಡಗುಗಳು, ಮೀನುಗಾರಿಕೆ ಬೋಟ್‌ಗಳು, ಮುಳುಗುಗಾರರು, ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಪರಿಹಾರ ಕಾರ್ಯಕ್ಕೆ ಭಾರೀ ಅಡ್ಡಿಯುಂಟಾಗಿದೆ. ಈಸ್ಟರ್ನ್ ಸ್ಟಾರ್ ಹೆಸರಿನ ಈ ಹಡಗು ಚೊಂಕಿಂಗ್ ಈಸ್ಟರ್ನ್ ಷಿಪ್ಪಿಂಗ್ ಕಾರ್ಪೋರೇಷನ್‌ಗೆ ಸೇರಿದ್ದು, ಈ ಸಂಸ್ಥೆ 1967ರಿಂದಲೂ ಪ್ರವಾಸ ಏರ್ಪಡಿಸುತ್ತಿದೆ. ಈ ಹಡಗಿನಲ್ಲಿ 50 ರಿಂದ 80 ವರ್ಷ ವಯಸ್ಸಿನ ಹಿರಿಯರು ಪ್ರವಾಸ ಹೊರಟಿದ್ದರು. ರಕ್ಷಿತ 20 ಜನರಲ್ಲಿ ಒಬ್ಬರು ಹಡಗಿನ ಕ್ಯಾಪ್ಟನ್ ಮತ್ತೊಬ್ಬರು ಎಂಜಿನಿಯರ್ ಸೇರಿದ್ದಾರೆ. ಹಡಗಿನಲ್ಲಿದ್ದವರೆಲ್ಲ ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Write A Comment