ಕನ್ನಡ ವಾರ್ತೆಗಳು

ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿವೃತ್ತ ಡಿವೈಎಸ್‌ಪಿ ಬಿ.ಜೆ. ಭಂಡಾರಿಗೆ ಅಂತಿಮ ನಮನ

Pinterest LinkedIn Tumblr

BJ_Bhandary_Funaral_1

ಮಂಗಳೂರು,ಜೂನ್.02 : ಸೋಮವಾರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ನಿವೃತ್ತ ಡಿವೈಎಸ್‌ಪಿ ಬಿ.ಜೆ. ಭಂಡಾರಿ ಅವರ ಮೃತ ದೇಹವನ್ನು ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಐಜಿಪಿ ಅಮೃತ್ ಪಾಲ್, ಪೊಲೀಸ್ ಆಯುಕ್ತ ಎಸ್. ಮುರುಗನ್, ಎಸ್.ಪಿ ಶರಣಪ್ಪ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಿವೃತ್ತ ಡಿವೈಎಸ್‌ಪಿ ಶರೀಫ್, ಎಎಸ್ ಐ ಅಬ್ಬಾಸ್, ನಿವೃತ್ತ ಎಸ್.ಪಿ ಮಿತ್ರ ಹೆರಾಜೆ ಮುಂತಾದವರು ಬಿ.ಜೆ ಭಂಡಾರಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

BJ_Bhandary_Funaral_2 BJ_Bhandary_Funaral_3 BJ_Bhandary_Funaral_4 BJ_Bhandary_Funaral_5 BJ_Bhandary_Funaral_6 BJ_Bhandary_Funaral_7 BJ_Bhandary_Funaral_8 BJ_Bhandary_Funaral_9 BJ_Bhandary_Funaral_10 BJ_Bhandary_Funaral_11

2014ರಲ್ಲಿ ಭಂಡಾರಿ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಂಧರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಹಾಗೂ ಆರೋಗ್ಯ ಭಾಗ್ಯ ಯೋಜನೆ ತುಂಬಾನೇ ಸಹಕಾರಿಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಬಿ.ಜೆ ಭಂಡಾರಿಯವರ ಮೃತ ದೇಹವನ್ನು ಅಂತಿಮವಾಗಿ ಪಡೀಲ್ ನಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು.

Write A Comment