ಮನೋರಂಜನೆ

ಒಂದೇ ಚಿತ್ರದಲ್ಲಿ ಖಾನ್ ತ್ರಯರ ಸಮಾಗಮ

Pinterest LinkedIn Tumblr

salman-khan-shah-rukh-aamir-khan

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರು ಇತ್ತೀಚೆಗಷ್ಟೇ ಗುದ್ದೋಡು ಪ್ರಕರಣದಿಂದ ಹೊರಬಂದಿರುವುದು ಅಭಿಮಾನಿಗಳಲ್ಲಿ ಖುಷಿಯ ನಗೆ ಅರಳಿಸಿದ್ದು, ಇದರ ಬೆನ್ನಿಗೆ ಬಾಲಿವುಡ್ ಖಾನ್ ತ್ರಯರಾದ ಸಲ್ಮಾನ್ ಖಾನ್, ಶಾರುಕ್ ಖಾನ್, ಆಮೀರ್ ಖಾನ್ ಮೂವರು ಒಂದೇ ಚಿತ್ರದಲ್ಲಿ ಅಭಿನಯಿಸುವ ಸುದ್ದಿ ಹೊರಬಿದ್ದಿದೆ.

ಬಾಲಿವುಡ್ ನಲ್ಲಿ ಖಾನ್ ತ್ರಯರ ಅಬ್ಬರ ಜೋರಾಗಿಯೇ ಇದೆ. ಒಬ್ಬರ ಸಿನಿಮಾವನ್ನು ಮತ್ತೊಬ್ಬರ ಸಿನಿಮಾ ಮೀರಿಸುವಂತಿರುತ್ತದೆ. ಅವರವರಿಗೆ ಅವರದೇ ಆದ ಅಭಿಮಾನಿಗಳ ಬಳಗೆ ಇದ್ದು, ಈ ಮೂವರ ಅಭಿಮಾನಿಗಳ ಬಳಗ ಒಗ್ಗೂಡಿದರೆ, ಇಡೀ ಬಾಲಿವುಡ್ ನ ಇತಿಹಾಸವೇ ಧೂಳಿಪಟವಾಗಲಿದೆ. ಅಂತ ಒಂದು ಸಾಹಸಕ್ಕೆ ಕೈಹಾಕಿದ್ದಾರೆ ನಿರ್ಮಾಪಕ ಸಾಜೀದ್ ನದಿಯಾದ್‌ವಾಲಾ ಅವರು, ತಮ್ಮ ಬ್ಯಾನರ್ ನ ಮುಂದಿನ ಚಿತ್ರದಲ್ಲಿ ಈ ಮೂವರು ಖಾನ್ ತ್ರಯರನ್ನು ಹಾಕಿಕೊಂಡು ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಈ ಚಿತ್ರ 2017ರ ಜನವರಿಯಲ್ಲಿ ಆರಂಭಗೊಳ್ಳಲಿದ್ದು, ಅದೇ ವರ್ಷದ ಡಿಸೆಂಬರ್ ನಲ್ಲಿ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಈ ಹಿಂದೆ ಮನ್ ಮೋಹನ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಮರ್ ಅಕ್ಬರ್ ಆಂಥೋನಿ ಚಿತ್ರ 1977ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದೇ ರೀತಿಯ ಚಿತ್ರದ ಎಳೆಯನ್ನಿಟ್ಟುಕೊಂಡು ಚಿತ್ರ ಮಾಡುವ ಉತ್ಸುಕದಲ್ಲಿದ್ದಾರೆ ಸಾಜೀದ್ ನದಿಯಾದ್ವಾಲಾ ಅವರು, ಚಿತ್ರದಲ್ಲಿ ಮೂವರು ಸ್ಟಾರ್ ಗಳಿಗೆ ಯೋಗ್ಯ ಪಾತ್ರ ನೀಡುವೆ ಎಂದಿದ್ದಾರೆ.

ಗುದ್ದೋಡು ಪ್ರಕರಣ ತೀರ್ಪು ಸಂದರ್ಭದಲ್ಲಿ ಸಲ್ಮಾನ್ ಖಾನ್ ಬೆನ್ನಿಗೆ ನಿಂತ ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್ ಹಾಗೂ ಆಮೀರ್ ಖಾನ್ ತಮ್ಮ ಮನಸ್ತಾಪವನ್ನು ಬದಿಗಿಟ್ಟು ಸಾಂತ್ವನದ ಮಾತುಗಳನ್ನಾಡಿದ್ದರು. ಇದರ ಹಿಂದೆ ಮೂವರು ಒಂದೇ ಚಿತ್ರದಲ್ಲಿ ನಟಿಸುತ್ತೀರುವ ಸುದ್ದಿ ಹೊರ ಬಿದ್ದಿರುವುದು ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿ ಮಾಡಿದೆ.

Write A Comment