ರಾಷ್ಟ್ರೀಯ

ನೂತನ ಕಪ್ಪುಹಣ ಕಾಯ್ದೆ : ಉತ್ತರಿಸಲು ವಿಫಲರಾದರೆ ಎರಡು ಲಕ್ಷ ರೂ. ದಂಡ

Pinterest LinkedIn Tumblr

Black-monye

ನವದೆಹಲಿ, -ಕಪ್ಪು ಹಣಕ್ಕೆ ಸಂಬಂಧಿಸಿದ ನೂತನ ಕಾನೂನಿನನ್ವಯ ತೆರಿಗೆ ಇಲಾಖೆ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದರೆ, ಅಂಥವರಿಗೆ 2 ಲಕ್ಷ ರೂ.ಗಳವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿ ಸೇರಿದ ಕಪ್ಪು ಹಣ

ಮತ್ತು ತೆರಿಗೆ ಹೇರಿಕೆ ಕಾಯ್ದೆ 2015ರ ಅಡಿ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ವಿದೇಶಗಳಲ್ಲಿ ಕಪ್ಪು ಹಣ ಹೊಂದಿರಬಹುದಾದ ಶಂಕಿತರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ವಿದ್ಯುನ್ಮಾನ ಮಾಧ್ಯಮದ ಮೂಲಕ (ಇಮೇಲ್ಸ್) ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಮನ್ಸ್ ಕೂಡ ನೀಡಲು ಅವಕಾಶ ಇರುತ್ತದೆ. ಈ ಕುರಿತಾದ ಮಸೂದೆಗೆ ಈಗಾಗಲೇ ರಾಷ್ಟ್ರಪತಿಯವರು ಅಂಕಿತ ಹಾಕಿದ್ದು, ಈ ನೂತನ ಕಪ್ಪುಹಣ ಕಾಯ್ದೆ 2016ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಕಪ್ಪು ಹಣ ಕಾಯ್ದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆದ 2 ದಿನಗಳ ಬಳಿಕ ರಾಜ್ಯಸಭೆಯಲ್ಲೂ ಸ್ವೀಕಾರವಾಗಿ, ರಾಷ್ಟ್ರಪತಿಯವರ ಕಚೇರಿಗೆ ಕಳುಹಿಸಲಾಗಿತ್ತು.

Write A Comment