ಕರ್ನಾಟಕ

ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ಡಾಕ್ಟರೇಟ್ ಪ್ರಧಾನ

Pinterest LinkedIn Tumblr

paarvathamma

ಬೆಂಗಳೂರು, ಮೇ 30: ಬೆಂಗಳೂರು ವಿಶ್ವ ವಿದ್ಯಾನಿಲಯದ 50ನೇ ಘಟಿಕೋತ್ಸವದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಸೇರಿದಂತೆ ಮೂವರಿಗೆ ರಾಜ್ಯಪಾಲ ವಜುಬಾಯಿ ರೂಡಾಬಾಯಿವಾಲ ಅವರು ಗೌರವ ಡಾಕ್ಟರೇಟ್‌ಗೆ ಪ್ರದಾನ ಮಾಡಿದರು.

ಕಲಾಸೇವೆಗಾಗಿ ಪಾರ್ವತಮ್ಮ ರಾಜ್‌ಕುಮಾರ್, ಸಾರ್ವಜನಿಕ ಸೇವೆಗಾಗಿ ಚಾಮರಾಜನಗರ ಯಳಂದೂರು ತಾಲೂಕಿನ ಮಾಂಬಳ್ಳಿಯ ಚಿನ್ನಸ್ವಾಮಿ ಮಾಂಬಳ್ಳಿ, ಶೈಕ್ಷಣಿಕ ಹಾಗೂ ಕೃಷಿ ರಂಗದ ಸೇವೆಗಾಗಿ ಚಿಕ್ಕಬಳ್ಳಾಪುರದ ಜಿ.ಸಿ.ನಾರಾಯಣರೆಡ್ಡಿ ಅವರಿಗೆ ಡಾಕ್ಟರೇಟ್ ನೀಡಲಾಯಿತು. ಒಟ್ಟು 199 ಚಿನ್ನದ ಪದಕ, 77 ನಗದು ಬಹುಮಾನ 212 ಮಂದಿಗೆ ಪಿಎಚ್‌ಡಿ ಪದವಿ, 47,202 ಮಂದಿ ಪದವಿ ಪ್ರಮಾಣಪತ್ರ ಪಡೆದರು. ಸಮಾರಂಭದಲ್ಲಿ ಯುಜುಸಿಯ ಅಧ್ಯಕ್ಷ ವೇದ್‌ಪ್ರಕಾಶ್, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಬೆಂಗಳೂರು ವಿವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Write A Comment