ರಾಷ್ಟ್ರೀಯ

ದೇಶದೆಲ್ಲೆಡೆ ಗೋಮಾಂಸ ನಿಷೇಧ ಇಲ್ಲ: ಅಮಿತ್ ಶಾ

Pinterest LinkedIn Tumblr

BJP-wont-ban-beef-across-the-country-Amit-Shah

ನವದೆಹಲಿ: ಗೋಮಾಂಸ ನಿಷೇಧವು ಆಯಾ ಪ್ರಾಂತ್ಯದ ಜನರ ನಂಬಿಕೆ ಹಾಗೂ ಮನೋಭಾವಕ್ಕೆ ಸಂಬಂಧಿಸಿದಾಗಿದೆ. ಹಾಗಾಗಿ ಗೋಮಾಂಸ ನಿಷೇಧ ನಿರ್ಧಾರ ಆಯಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದ್ದು, ದೇಶದೆಲ್ಲೆಡೆ ಗೋಮಾಂಸ ನಿಷೇಧ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.

ದೇಶದಲ್ಲೆಡೆ ಗೋಮಾಂಸ ನಿಷೇಧ ಹೇರುವುದರ ಕುರಿತಂತೆ ಮಾತನಾಡಿರುವ ಅವರು, ದೇಶದೆಲ್ಲೆಡೆ ಗೋಮಾಂಸಕ್ಕೆ ನಿಷೇಧ ಹೇರುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಗೋಮಾಂಸ ನಿಷೇಧ ಹೇರಿಕೆ ನಿರ್ಧಾರ ಆಯಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಾಗಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಆಯಾ ಪ್ರಾಂತ್ಯ ಜನರ ನಂಬಿಕೆ ಹಾಗೂ ಮನಸ್ಥಿತಿಯನ್ನಾಧರಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಂತರ ಗೋವಾ ಗೋಮಾಂಸ ಹಾಗೂ ಗೋಹತ್ಯೆ ನಿಷೇಧ ಕುರಿತಂತೆ ಮಾತನಾಡಿರುವ ಅವರು, ಗೋವಾ ಸರ್ಕಾರ ತಮ್ಮ ರಾಜ್ಯದ ಜನರೊಂದಿಗೆ ಚರ್ಚಿಸಿ ನಂತರ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ‘ಗೋಮಾಂಸ ತಿನ್ನಲೇಬೇಕೆನ್ನುವವರು ಪಾಕಿಸ್ತಾನಕ್ಕೆ ಹೋಗಲಿ’ ಎಂಬ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ಮಾತನಾಡಿರುವ ಅವರು, ನಖ್ವಿ ನೀಡಿರುವ ಹೇಳಿಕೆ ವೈಯಕ್ತಿಕ ಹೇಳಿಕೆಯಾಗಿದ್ದು, ಈ ಕುರಿತಂತೆ ಹೇಳಿಕೆ ನೀಡಲು ಸಾಧ್ಯವಿಲ್ಲ. ನಖ್ವಿ ಹೇಳಿಕೆ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Write A Comment