ಮೂಡುಬಿದಿರೆ,ಮೇ.25 : ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲುಸುತ್ತು, ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್ ಪಲ್ಟಿಯಾಗಿ ತೋಟಕ್ಕೆ ಬಿದ್ದಿದೆ.
ಮುಂಬೈ ರೂಟ್ನ ಕೆನಾರ ಪಿಂಟೋ ಖಾಸಗಿ ಬಸ್ ಸೋಮವಾರ ಮುಂಜಾನೆ ಮೂಡುಬಿದಿರೆಯಲ್ಲಿ ಪ್ರಯಾಣಿಕರನ್ನು ಇಳಿಸಿ, ಮಂಗಳೂರಿನ ಕಡೆಗೆ ತೆರಳುತಿದ್ದು, ತಿರುವು ಪ್ರದೇಶವಾಗಿರುವ ಹಂಡೇಲುಸುತ್ತು ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲೇ ಇದ್ದ ತೆಂಗು-ಕಂಗಿನ ತೋಟಕ್ಕೆ ಬಿದ್ದಿದೆ. ಘಟನೆ ವೇಳೆ ಬಸ್ನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ. ಬಸ್ನಲ್ಲಿದ್ದ ಮಹಿಳೆಯೊಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ನೆರವಾದರು.
ಬಸ್ ಬೀಳುವ ರಭಸಕ್ಕೆ 2 ತೆಂಗಿನ ಮರಗಳು ತಕ್ಷಣ ಮುರಿದುಬಿದ್ದಿದೆ. ಮೂಡುಬಿದಿರೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು






