ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಅವರ ಪತ್ನಿಗಾಗಿ ನಿರ್ದೇಶಕರೊಬ್ಬರು ಭಾರೀ ಹುಡುಕಾಟ ನಡೆಸಿದ್ದಾರೆ. ಇದೇಕೆ ಹೀಗೆ ಅಂತೀರಾ..? ಈ ಸ್ಟೋರಿ ಓದಿ.
ಹೌದು. ಭಾರತದ ಕ್ರಿಕೆಟ್ ತಂಡದ ನಾಯಕ ಧೋನಿ ಅವರ ಜೀವನಾಧಾರಿತ ಚಿತ್ರ ನಿರ್ಮಾಣವಾಗಲಿದೆ ಎಂಬ ಮಾತು ಕಳೆದೊಂದು ವರ್ಷದಿಂದ ಕೇಳಿ ಬರುತ್ತಿದ್ದರೂ ಇನ್ನೂ ಚಿತ್ರೀಕರಣ ಆರಂಭವೇ ಆಗಿಲ್ಲ. ಇದಕ್ಕೆ ತೊಡಕಾಗಿರುವುದು ಧೋನಿ ಅವರ ಪತ್ನಿಯ ಪಾತ್ರಕ್ಕೆ ಸಮರ್ಪಕ ನಟಿ ಸಿಗದಿರುವುದು.
ಧೋನಿ ಅವರ ಪಾತ್ರಕ್ಕೆ ಸುಶಾಂತ್ ಸಿಂಗ್ ರಜಪೂತ್ ನಾಯಕ ಎಂಬ ಮಾತೂ ಕೇಳಿ ಬಂದಿತ್ತು. ಮೊದಲಿಗೆ ಸ್ಕ್ರಿಪ್ಟ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ ನಿರ್ದೇಶಕ ನೀರಜ್ ಪಾಂಡೆ ಅವರಿಗೆ ಬಜೆಟ್ ಸಮಸ್ಯೆ ಎದುರಾಯಿತು . ಇದೀಗ ಚಿತ್ರಕಥೆ , ಬಜೆಟ್ ಸಮಸ್ಯೆಯೂ ಬಗೆಹರಿದಿದ್ದು ನಾಯಕಿ ಯಾರು ಎಂಬ ಗೊಂದಲ ಆರಂಭವಾಗಿದೆ.
ಧೋನಿ ಹೆಂಡತಿ ಸಾಕ್ಷಿ ಸಿಂಗ್ ರಾವತ್ ಪಾತ್ರಕ್ಕಾಗಿ ಸೂಕ್ತ ನಟಿಯ ಹುಡುಕಾಟದಲ್ಲಿರುವ ನಿರ್ದೇಶಕರು ಶ್ರದ್ಧಾ ಕಪೂರ್, ಆಲಿಯಾ ಭಟ್ ಮತ್ತು ಕೃತಿ ಸನೊನ್ಗೆ ಆಫರ್ ಮಾಡಿದ್ದು ಈ ಮೂವರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
