ರಾಷ್ಟ್ರೀಯ

ನಾದಿನಿ ಜತೆಗಿನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಬಡಿದು ಕೊಂದ ಪತಿ

Pinterest LinkedIn Tumblr

8642080625_crime_scene_murder_generic

ತನ್ನ ಅನೈತಿಕ ಸಂಬಂಧದ ಬಗೆಗೆ ಮಾತನಾಡಿದ ಪತ್ನಿಯನ್ನು ಪತಿ ಮಹಾಶಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ನಳಂದಾ ಸಮೀಪ ವಾಸವಾಗಿರುವ ರವಿ ಬಿಂಡ್ ಹಾಗೂ ಆತನ ಪತ್ನಿ ಲೋಧಿನಿ ದೇವಿ ಅನ್ಯೋನ್ಯವಾಗಿದ್ದರು. ಈ ನಡುವೆ ಲೋಧಿನಿ ದೇವಿಯ ಸಹೋದರಿಯೊಂದಿಗೆ ರವಿ ಅನೈತಿಕ ಸಂಬಂಧವನ್ನು ಹೊಂದಿದ್ದ ಎನ್ನಲಾಗಿದ್ದು ಇದನ್ನು ತಿಳಿದ ಪತ್ನಿ ಇಂತಹ ಕೃತ್ಯ ಸರಿಯಲ್ಲ. ಸಹೋದರಿಯೊಂದಿಗಿನ ಸಂಬಂಧವನ್ನು ಬಿಟ್ಟು ಬಿಡಿ ಎಂದು ಬುದ್ದಿ ಹೇಳಿದ್ದಾಳೆ.

ಇದರಿಂದ ಆಕ್ರೋಶಗೊಂಡ ರವಿ ತನ್ನ ಸಹೋದರಿ ಹಾಗೂ ತಂದೆ ತಾಯಿಗಳು ಸೇರಿ ಆಕೆಯನ್ನು ಕಲ್ಲಿನಲ್ಲಿ ಜಜ್ಜಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರಕರಣವನ್ನು ಮುಚ್ಚಿ ಹಾಕುವ ದೃಷ್ಟಿಯಿಂದ ಆಕೆಯ ಮೃತದೇಹವನ್ನು ಸುಟ್ಟುಹಾಕಲು ಪ್ರಯತ್ನಿಸಿದ್ದು ಈ ಸಮಯದಲ್ಲಿ ಜೋರಾಗಿ ಕೂಗುತ್ತಿರುವ ಶಬ್ದ ಕೇಳಿದ ಗ್ರಾಮಸ್ಥರು ಮನೆಯೊಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ರಾಹುವೈ ಪೊಲೀಸರು ಆರೋಪಿ ರವಿ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment