ಮಂಗಳೂರು,ಮೇ.08 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಕ್ಷಿಣ ಕನ್ನಡ ಮಂಗಳೂರು, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಅಚಲ್ ಇಂಡಸ್ಟ್ರೀಸ್ ಇಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ್ರ ನ್ಯಾಯಾಲಯ, ಮಂಗಳೂರು ಇದರ ಗೌರವಾನ್ವಿತ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ನೇರವೇರಿಸಿದ್ದರು. ನ್ಯಾಯಾಧೀಶರು ತಮ್ಮ ಉದ್ಘಾಟನಾ ನುಡಿಗಳಲ್ಲಿ ಕಾರ್ಮಿಕ ದಿನಾಚರಣೆಯ ವೈಶಿಷ್ಟ್ಯತೆ, ವ್ಯಕ್ತಿಯ ವ್ಯಯಕ್ತಿಕ ಮತ್ತು ಸಾರ್ವಜನಿಕಜೀವನದಲ್ಲಿ ಕಾನೂನಿನ ಜ್ಞಾನದ ಅಗತ್ಯತೆಯ ಬಗ್ಗೆ ಹಾಗೂ ಕಾರ್ಮಿಕರು ತಮಗೆ ಅನ್ವಯವಾಗುವ ಕಾರ್ಮಿಕ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಗಣೇಶ ಬಿ,ಗೌರಾವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಕಾನೂನು ಸೇವಾ ಪ್ರಾಧಿಕಾರದ ಮಹತ್ವ ಹಾಗೂ ವೈಶಿಷ್ಟ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿದರು.ಮಂಗಳೂರು ವಕೀಲರ ಸಂಘದಿಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ.ಎಸ್ ಪಿ ಚಂಗಪ್ಪ, ವಕೀಲರ ಸಂಘದ ಅಧ್ಯಕ್ಷರು, ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೆ ಕಾನೂನು ಅಗತ್ಯವೆಂದು ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.ವಕೀಲ ಸಂಘದ ಕಾರ್ಯದರ್ಶಿಗಳಾದ ಶ್ರೀ.ರಾಘವೇಂದ್ರಇವರು,ರೈತರು ಮತ್ತು ಕಾರ್ಮಿಕರು ಒಂದು ನಾಣ್ಯದ ಎರಡು ಮುಖಗಳಂತೆ.ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕೆಂದು ತಿಳಿಸಿದರು.
ಶ್ರೀ. ಮೈಲಾರಪ್ಪ, ಪ್ರಭಾರಕಾರ್ಮಿ ಅಧಿಕಾರಿಗಳು, ಉಪ ವಿಭಾಗ-1, ಮಂಗಳೂರು ಇವರು ಸುರಕ್ಷಿತ ಸಮೃದ್ಧಿ ಹಾಗೂ ಸ್ವಸ್ಥ್ಯ ಸಮಾಜ ರೂಪಿಸಲು ಕಾನೂನಿನ ಅಗತ್ಯ.ಅಚಲ್ ಸಂಸ್ಥೆಯ ಮಾಲೀಕರಾದ ಶ್ರೀ.ಗಿರಿಧರ್ ಪ್ರಭು,ತಾವು ತಮ್ಮ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು .ಡಿ.ಜಿ.ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ಇವರು ವಹಿಸಿದ್ದು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೈಗಾರಿಕಾ ಶಾಂತಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಕಾರ್ಮಿಕರು ಹಾಗೂ ಮಾಲೀಕರ ಪಾತ್ರ, ಕಾರ್ಮಿಕರ ಹಕ್ಕುಗಳು, ವಿವಿಧಕಾರ್ಮಿಕ ಕಾಯ್ದೆಗಳಡಿ ಲಭ್ಯವಿರುವ ಸವಲತ್ತುಗಳು ಮೊದಲಾದವುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮವು ಸಂಸ್ಥೆಯ ಕಾರ್ಮಿಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಸ್ವಾಗತ/ ನಿರೂಪಣೆಯನ್ನು ಹಿರಿಯಕಾರ್ಮಿಕ ನಿರೀಕ್ಷಕರು ಶ್ರೀಮತಿ. ಮೇರಿಡಯಾಸ್ ಇವರು ನೆರವೇರಿಸಿದರು. ಗೋವಿಂದರಾಜು ವಂದಿಸಿದರು.
