ಮಂಗಳೂರು,ಮೇ.08 : ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಗುರುವಾರ ಮ.ನ ಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು , ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿರುವ ನೂತನ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಶೇ 60 ರಷ್ಟು ಯಶಸ್ವಿ ಸಾಧಿಸಿದ್ದು ಇನ್ನು ಮುಂದೆ ಇದು ಶೇ 100ರಷ್ಟು ಜಾರಿಗೆ ತರಲು ಯತ್ನಿಸಲಾಗುತ್ತಿದೆ ಹಾಗೂ ಕಸವನ್ನು ಸಂಗ್ರಹಿಸುವುದು ಮತ್ತು ಅದನ್ನು ವಿಲೇವಾರಿ ಮಾಡುವ ಕೆಲಸ ಚೆನ್ನಾಗಿ ನಡೆಯುತ್ತಿದೆ. ಮುಂದಿನ ದಿನಗಳನ್ನು ಈ ವ್ಯವಸ್ಥೆಯನ್ನು ನಗರದ ಹೊರವಲಯಗಳಿಗೂ ವಿಸ್ತರಿಸಲಾಗುವುದು ಈ ಸಂಧರ್ಭದಲ್ಲಿ ಹೇಳಿದ್ದರು.
ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವಿಧಿಸಿರುವ ಘನತ್ಯಾಜ್ಯ ನಿರ್ವಹಣೆಯ ಸೆಸ್ ಎಸ್‌ಎಎಸ್‌ಕ್ಕಿಂತಲೂ ಜಾಸ್ತಿ ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ ಈ ಸೆಸ್ ಅನ್ನು ಕಡಿಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಂಗಳೂರು ಮಲೇರಿಯದ ರಾಜಧಾನಿಯಾಗಿರುವುದು ಅತ್ಯಂತ ದುಃಖಕರ ಸಂಗತಿ. ಮಲೇರಿಯ, ಚಿಕನ್ ಗುನ್ಯ ನಿರ್ಮೂಲನೆ ನಿವಾರಣೆಗೆ ತಂಡ ಮಾಡಿದ್ದೇವೆ. ಜನರಲ್ಲಿ ಮಲೇರಿಯ ಕುರಿತು ಜಾಗೃತಿ ಮೂಡಿಸಲು ಎಂಪಿಡಬ್ಲ್ಯೂ ವರ್ಕರ್‌ಗಳನ್ನು ನೇಮಿಸಲಾಗಿದೆ. ನಗರದಲ್ಲಿ ಮಲೇರಿಯ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ ಅವರನ್ನು ಕೂಡ ಸನ್ಮಾನಿಸಿ ಅಭಿನಂದಿಸಲಾಯಿತು.ಕೆಸಿಸಿಐ ಉಪಾಧ್ಯಕ್ಷ ರಾಮಮೋಹನ್ ಪೈ ಮರೂರು, ಪ್ರಧಾನ ಕಾರ್ಯದರ್ಶಿ ಜೀವನ್ ಸಾಲ್ಡಾನ, ಎಂ.ಗಣೇಶ್ ಭಟ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.



