ಬಾಲಿವುಡ್ ನಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದ ದೀಪಿಕಾ ಪಡುಕೋಣೆ ಇದೀಗ ಪರ ಪುರುಷನೊಂದಿಗೆ ಹಾಸಿಗೆ ಹಂಚಿಕೊಳ್ಳುವುದು ಮಹಿಳೆಗೆ ಬಿಟ್ಟ ವಿಚಾರ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಖ್ಯಾತ ಫ್ಯಾಷನ್ ಮ್ಯಾಗಜೀನ್ ವೋಗ್ ಹೊರತಂದಿರುವ, ಮೈಚಾಯ್ಸ್ ಎಂಬ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ಈ ಹೇಳಿಕೆ ನೀಡಿದ್ದು ಇದರಲ್ಲಿ ಮಹಿಳೆಯರು ಯಾವ ರೀತಿ ವಸ್ತ್ರ ಧರಿಸಬೇಕು, ಹೇಗಿರಬೇಕು ಎಂಬ ಆಯ್ಕೆ ಮಹಿಳೆಯರದ್ದು ತಾವು ದಪ್ಪಗಿರಬೇಕೋ, ಸೈಜ್ ಝೀರೋ ಆಗಬೇಕೋ, ಎಂಬುದರ ಆಯ್ಕೆ ಮಹಿಳೆಯದ್ದಾಗಿರುತ್ತದೆ ಅಲ್ಲದೇ ಹೆಣ್ಣಿಗೆ ತಾನು ಮದುವೆ ಆಗ ಬೇಕೋ? ಬೇಡವೋ, ಮದುವೆಗಿಂತ ಮುಂಚೆ ಸೆಕ್ಸ್ ಮಾಡಬಹುದೋ, ಪರ ಪುರುಷನ ಜತೆ ಸೆಕ್ಸ್ ಮಾಡಬಹುದೋ, ಅಥವಾ ಸೆಕ್ಸ್ ಮಾಡಲೇಬೇಕಾ? ಎಂಬುದೂ ಸಹ ಮಹಿಳೆಯ ಆಯ್ಕೆಯಾಗಿದ್ದು ಒಂದೊಮ್ಮೆ ಒಬ್ಬ ಮಹಿಳೆ ಪುರುಷ ಅಥವಾ ಮಹಿಳೆ ಅಥವಾ ಇಬ್ಬರನ್ನೂ ಪ್ರೀತಿಸಿದರೆ ಅದನ್ನು ಟೀಕಿಸುವ ಹಕ್ಕು ಯಾರಿಗೂ ಇಲ್ಲ ಎನ್ನುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಮೈಚಾಯ್ಸ್ ಎಂಬ ಈ ವಿಡಿಯೋ ದಲ್ಲಿ ದೀಪಿಕಾಳ ಹೇಳಿಕೆಯನ್ನು ಗಮನಿಸಿದ ವೀಕ್ಷಕರು ಇದು ಎಲ್ಲರೂ ನೋಡಬೇಕಿರುವ ವಿಡಿಯೋ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ದೀಪಿಕಾ ಮಾನಸಿಕ ಖಿನ್ನತೆಯಿಂದ ಹೊರಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಕಿರು ವಿಡಿಯೋ ದಲ್ಲಿ ಸಂಸ್ಥೆ 99 ಮಹಿಳೆಯರನ್ನು ಮಾತನಾಡಿಸಿದ್ದು ಯೂಟ್ಯೂಬ್ನಲ್ಲಿ ಪ್ರಕಟಿಸಿದ ಎರಡೇ ದಿನದಲ್ಲಿ 20 ಲಕ್ಷ ಜನರು ಇದನ್ನು ವೀಕ್ಷಿಸಿದ್ದು ಭಾರೀ ಜನಪ್ರಿಯತೆ ಗಳಿಸುತ್ತಿದೆ. ಅಲ್ಲದೇ ಇಂತಹ ವಿವಾದಾತ್ಮಕ ಹೇಳಿಕೆಯಿಂದಲೇ ಇದು ಇಷ್ಟೊಂದು ಪ್ರಚಾರ ಪಡೆದಿದೆ ಎಂಬ ಮಾತೂ ಕೇಳಿ ಬಂದಿದೆ.
