ಅಂತರಾಷ್ಟ್ರೀಯ

ಇಂಗ್ಲೆಂಡ್‍ನ ಮಾಜಿ ಕೆವಿನ್ ಪೀಟರ್‍ಸನ್ ಆಸ್ಟ್ರೇಲಿಯಾದಲ್ಲಿ ಅರೆಸ್ಟ್!

Pinterest LinkedIn Tumblr

Kevin-peterson

ಸಿಡ್ನಿ: ಇಂಗ್ಲೆಂಡ್‍ನ ಮಾಜಿ ಆಟಗಾರ ಕೆವಿನ್ ಪೀಟರ್‍ಸನ್ ಭಾನುವಾರ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಕ್ಷರಶಃ ಆತಂಕ ಹುಟ್ಟಿಸಿದ್ದಾರೆ.

ವಿಶ್ವಕಪ್‍ನಲ್ಲಿ ಕಾಣಿಸಿಕೊಂಡ ಮಾಜಿ ಆಟಗಾರರ ಪೈಕಿ ಕೆವಿನ್ ಕೂಡ ಒಬ್ಬರು, ಭಾನುವಾರ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ನಂತರ ಈ ರೀತಿಯಾಗಿ ಟ್ವೀಟ್ ಮಾಡಿರುವ ಪೀಟರ್‍ಸನ್ ತಾವೂ ಬಂಧನಕ್ಕೊಳಗಾಗುತ್ತಿರುವ ಫೋಟೋವನ್ನೂ ಕೂಡ ಟ್ವಿಟ್ಟರ್‍ನಲ್ಲಿ ಹಾಕಿದ್ದಾರೆ.

ವಿಶ್ವಕಪ್‍ನಲ್ಲಿ ಕಮೆಂಟೆರಿ ನೀಡುತ್ತಿದ್ದ ಪೀಟರ್‍ಸನ್ ಆಸ್ಟ್ರೇಲಿಯಾದಲ್ಲಿಯೇ ಹೆಚ್ಚಾಗಿ ಕಾಲಕಳೆಯುತ್ತಿದ್ದಾರೆ. ಹೀಗಿರುವಾಗ ಅಭಿಮಾನಿಗಳ ಪ್ರತಿಕ್ರಿಯೆ ತಿಳಿದುಕೊಳ್ಳಲು ಪೀಟರ್‍ಸನ್ ತಮಾಷೆಗಾಗಿ ಬಂಧನದ ಸುದ್ದಿಯನ್ನು ಟ್ವಿಟ್ಟರ್‍ನಲ್ಲಿ ಹಾಕಿ ಅಭಿಮಾನಿಗಳನ್ನು ಫೂಲ್ ಮಾಡಿದ್ದಾರೆ.

Write A Comment