ಕರಾವಳಿ

ಬೊಕ್ಕಪಟ್ಣ ಸುಶೀಲ ಜಿ. ಕುಲಾಲ್ ವಿಧಿವಶ

Pinterest LinkedIn Tumblr

22

ಮಂಗಳೂರು : ಬೊಕ್ಕಪಟ್ಣ ಕರ್ನಲ್ ಗಾರ್ಡನ್ ನ ದಿವಂಗತ ಗುರುವಪ್ಪ ಮೇಸ್ತ್ರಿ ಯವರ ಧರ್ಮಪತ್ನಿ ಸುಶೀಲ ಜಿ. ಕುಲಾಲ್ (86) ಅವರು ಮಾ. 22 ರಂದು ಅವರ ಸುಪುತ್ರನ ಶಕ್ತಿನಗರದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಬೋಳೂರು ಶ್ರೀ ರಾಮಾಂಜನೇಯ ತಾಲೀಮು, ವ್ಯಾಯಾಮ ಶಾಲೆ, ಕುಲಾಲ ಪ್ರತಿಷ್ಥಾನ (ರಿ.) ಇದರ ಮಾರ್ಗದರ್ಶಕರಾಗಿದ್ದರು. ಮುಂಬಯಿಯ ಪತ್ರಕರ್ತ ದಿನೇಶ್ ಕುಲಾಲ್ ಸಹಿತ ಆರು ಮಂದಿ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ದ. ಕ. ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ್ ಅಳಪೆ, ರಾಮಾಂಜನೇಯ ತಾಲೀಮು, ವ್ಯಾಯಾಮ ಶಾಲೆಯ ಗೌರವ ಅಧ್ಯಕ್ಷ ಮೋಹನ್ ಬರ್ಕೆ, ವೀರನಾರಾಯಣ ದೇವಸ್ಥಾನದ ಆಡಳಿತ ಮುಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಕುಲಾಲ ಪ್ರತಿಷ್ಥಾನ ಆಡಳಿತ ಟ್ರಸ್ಟಿ ಸುರೇಶ್ ಕುಲಾಲ್, ಕುಲಾಲ ಸಂಘ ಮುಂಬಯಿಯ ಗೌ. ಅಧ್ಯಕ್ಷ ಪಿ. ಕೆ. ಸಾಲ್ಯಾನ್, ಮಹಾರಾಷ್ಟ್ರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Write A Comment