ಮಂಗಳೂರು,ಮಾರ್ಚ್.10 : ಕರಾವಳಿ ಕಾವಲು ಪೊಲೀಸ್ ಪಡೆಯ ಎಸ್‌ಪಿ ಎಸ್.ಎಲ್. ಚೆನ್ನ ಬಸಪ್ಪ ಅವರಿಗೆ ಲಭಿಸಿದ ಖಚಿತ ಮಾಹಿತಿ ಪ್ರಕಾರ ಮಂಗಳೂರಿನ ಹಳೆ ಬಂದರ್ ಬಳಿ ಬೈಹುಲ್ಲು ದಕ್ಕೆಯ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಕುದ್ರೋಳಿಯ ಎ.ಕೆ. ಕಂಪೌಂಡಿನ ಅಬ್ದುಲ್ ರಹೀಂ ಯಾನೆ ಅಂಕುಶ್ ರಹೀಂ (42) ಎಂಬವನನ್ನು ಬಂಧಿಸಿ 1,02,000 ರೂ. ಮೌಲ್ಯದ 5 ಕೆ.ಜಿ. 100 ಗ್ರಾಂ ಗಾಂಜಾ, ಸಹಿತ ಹೊಂಡಾ ಆ್ಯಕ್ಟಿವಾ ಸ್ಕೂಟರ್ ಮತ್ತು ನಗದು 1500 ರೂ ವನ್ನು ವಶ ಪಡಿಸಿಕೊಂಡಿದ್ದಾರೆ.
ಇನ್‌ಸ್ಪೆಕ್ಟರ್ ವೈ. ಗಂಗಿ ರೆಡ್ಡಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಪ್ರಾಣೇಶ್, ವಿಜಯ, ಲೋಕೇಶ್, ಕಾನ್ ಸ್ಟೇಬಲ್‌ಗಳಾದ ನಾಸಿರ್ ಮತ್ತು ಉಸ್ಮಾನ್ ಅವರು ಈ ಕಾರ್ಯಾಚರಣೆ ಪಾಲ್ಗೊಂಡಿದ್ದರು. ಆರೋಪಿ ಅಬ್ದುಲ್ ರಹೀಂ ಗಾಂಜಾವನ್ನು ತಂದಿರಿಸಿ ಗ್ರಾಹಕರನ್ನು ಕಾಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅಬ್ದುಲ್ ರಹೀಂ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಅಬ್ದುಲ್ ರಹೀಂ ಈ ಹಿಂದೆ 2014 ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಆಗ ತಪ್ಪಿಸಿಕೊಂಡಿದ್ದನು. ಬಳಿಕ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.
