ಕನ್ನಡ ವಾರ್ತೆಗಳು

ಜೀವವಿಮಾ ಪ್ರತಿನಿಧಿಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಸದರಿಗೆ ಮನವಿ

Pinterest LinkedIn Tumblr

nalini_manavi_photo

ಮಂಗಳೂರು,ಮಾರ್ಚ್.07: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ(ರಿ) ಇದರ ಕರೆಯಂತೆ ಮಂಗಳೂರು ಜೀವ ವಿಮಾ ಪ್ರತಿನಿಧಿ ವೇದಿಕೆ(ರಿ) ಇವರು ಜೀವವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ, ನಡೆಸುತ್ತಿರುವ ಪ್ರತಿಭಟನೆಯ ಬೇಡಿಕೆಗಳನ್ನು ಈಡೇರಿಕೆಗೆ ಸಂಸತ್ತಿನಲ್ಲಿ ಒತ್ತಾಯಿಸುವಂತೆ ಮಂಗಳೂರು ಸಂಸದರಾದ ಶ್ರೀ ನಳಿನ್‌ಕುಮಾರ್ ಕಟೀಲ್‌ರವರಿಗೆ ಮನವಿಯನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀ ಕಾಶಿನಾಥ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯಭಟ್, ಸಂಘಟನಾ ಕಾರ್ಯದರ್ಶಿ ಶ್ರೀ ರಾಮ ಅಮೀನ್, ಜೊತೆ ಕಾರ್ಯದರ್ಶಿ ಶ್ರೀ ಮಧುಚಂದ್ರ ಹಾಗೂ ಉಡುಪಿ ಡಿವಿಜನ್ ಕೌನ್ಸಿಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೀಲಾವತಿ ಹಾಗೂ ಸದಸ್ಯರಾದ ಶ್ರೀ ಗುರುಚರಣ್ ರಾವ್, ಶ್ರೀ ಸಿ.ವಿ. ಭಟ್, ಶ್ರೀ ವಿಶ್ವನಾಥ ಗಟ್ಟಿ, ಶ್ರೀ ಕೃಷ್ಣ ಆಚಾರ್, ಶ್ರೀಮತಿ ಸುಶ್ಮಾ ಜನಾರ್ದನ್, ಶ್ರೀಮತಿ ರಾಜೀವಿ, ಶ್ರೀ ಕೃಷ್ಣ ಭಟ್, ಶ್ರೀ ಮಾಧವ ಕಾಂಚನ್, ಶ್ರೀ ಪುರುಶೋತ್ತಮ ರಾವ್ ಮುಂತಾದವರು ಉಪಸ್ಥಿತರಿದ್ದರು.

Write A Comment