ಕರ್ನಾಟಕ

ತಮಿಳಿಗರಿಗೆ ತಮಿಳು ಭಾಷೆ ಮಾತನಾಡುವುದು ಒಂದು ಫ್ಯಾಷನ್, ಕನ್ನಡಿಗರು ಕನ್ನಡ ಮಾತನಾಡುವುದು ದಾರಿದ್ರ್ಯ : ಸಾಹಿತಿ ಶ್ರೀನಿವಾಸ ವೈದ್ಯ

Pinterest LinkedIn Tumblr

pvec23p3Ankitha_0

ಬೆಂಗಳೂರು: ‘ತಮಿಳಿಗರಿಗೆ ತಮಿಳು ಭಾಷೆ ಮಾತನಾಡುವುದು ಒಂದು ಫ್ಯಾಷನ್. ಆದರೆ ಕನ್ನಡಿಗರು ಕನ್ನಡ ಮಾತನಾಡುವುದು ದಾರಿದ್ರ್ಯ ಎಂದು ಭಾವಿಸುವುದರಿಂದ ಭಾಷೆ ಬೆಳವಣಿಗೆಗೆ  ಅಡ್ಡಿಯಾಗಿದೆ’ ಎಂದು ಸಾಹಿತಿ ಶ್ರೀನಿವಾಸ ವೈದ್ಯ ಬೇಸರ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನವು ನಗರದ  ವಾಡಿಯಾ ಸಭಾಂಗಣ­ದಲ್ಲಿ  ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಡುಂಡಿ­ರಾಜ್ ಅವರ ‘ಹನಿ ಮೋಹಿನಿ’, ವಸುಮತಿ ಉಡುಪ ಅವರ ‘ಮನ್ವಂತರ’, ಡಾ.ಮಮತಾರಾವ್ ಅವರ ಜಯಂತ್ ಕಾಯ್ಕಿಣಿ ಅವರ ‘ಕಥನಾವರಣ’, ಡಾ.ಜಿ.ಎನ್.­ಉಪಾಧ್ಯ ಅವರ ‘ವಿನೋದ ಸೌಧದ ಸಾಹಿತಿ ಡುಂಡಿರಾಜ್’  ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕನ್ನಡಿಗರು  ಕನ್ನಡ ಮಾತನಾ­ಡು­ವುದೇ ಫ್ಯಾಷನ್ ಎಂದು ಪರಿಗ­ಣಿಸಬೇಕು. ಅನ್ಯ ಭಾಷೆಗಳ ಮೋಹ­ವನ್ನು ಬಿಟ್ಟು ಕನ್ನಡತನವನ್ನು ಉಳಿಸಿ­ಕೊಳ್ಳಬೇಕಾಗಿದೆ. ಅಸ್ಮಿತೆ ಮತ್ತು ಅಭಿವೃದ್ಧಿಗಳು ಪರಸ್ಪರ ಪೂರಕ­ವಾಗುವ ಬದಲು ವಿರೋ­ಧಾಭಾಸವಾಗುತ್ತಿರುವುದು ವಿಪರ್ಯಾಸಯಾಗಿದೆ’ ಎಂದರು.

‘ಸರೋಜಿನಿ ಮಹಿಷಿ ತಮ್ಮ ವರದಿ­ಯಲ್ಲಿ ಉದ್ಯೋಗದಲ್ಲಿ ಕನ್ನಡಿ­ಗರಿಗೆ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಅವರು ಅಸುನೀಗಿ ತಿಂಗಳೇ ಕಳೆ­ದಿದೆ. ಮಹಿಷಿ ವರದಿಯಿಂದ ಪ್ರೇರೇ­ಪಿತವಾಗಿ, ಬೇರೆ ರಾಜ್ಯಗಳು ತಮ್ಮ ರಾಜ್ಯದಲ್ಲಿ ಮಾತೃಭಾಷೆಗೆ ಮನ್ನಣೆ ನೀಡಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಕಲ್ಪಿಸಿಕೊಡುತ್ತಿವೆ. ಆದರೆ ನಮ್ಮಲ್ಲಿ ಇಂತಹ ಪ್ರಯತ್ನಗಳು ನಡೆದಿಲ್ಲ’   ಎಂದು ವಿಷಾದಿಸಿದರು.

ಹಾಸ್ಯ ಸಾಹಿತಿ ವೈ.ವಿ.ಗುಂಡೂ­ರಾವ್ ಅವರು ಮಾತನಾಡಿ,  ‘ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹಾಸ್ಯ ರೂಢಿಸಿಕೊಂಡವರು ಎಚ್.­ಡುಂಡಿರಾಜ್.  ಜನರು ಅವರನ್ನು ಹಾಸ್ಯ ಸಾಹಿತಿ ಎಂದು ಕರೆಯುವ ಬದಲು ಹಾಸ್ಯಪ್ರಜ್ಞೆಯುಳ್ಳ ಸಾಹಿತಿ ಎಂದು ಕರೆಯಬೇಕು’ ಎಂದರು.

Write A Comment