ಕನ್ನಡ ವಾರ್ತೆಗಳು

ಕಾರ್ಪ್ ಬ್ಯಾಂಕ್‌ಗೆ ರೂ. 147.21 ಕೋಟಿ ನಿವ್ವಳ ಲಾಭ.

Pinterest LinkedIn Tumblr

corp_press_meet_1

ಮಂಗಳೂರು,ಫೆ.10: ಸಾರ್ವಜನಿಕ ರಂಗದ ಕಾರ್ಪೊರೇಶನ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ 147.21 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 126.69 ಕೋಟಿ ರೂ. ಲಾಭ ಗಳಿಸಿದ್ದ ಬ್ಯಾಂಕ್ ಪ್ರಸ್ತುತ ಶೇ. 16.26ರಷ್ಟು ಪ್ರಗತಿ ದಾಖಲಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಸ್.ಆರ್. ಬನ್ಸಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಂಕ್‌ನ ಒಟ್ಟು ವ್ಯವಹಾರ ಶೇ. 8.72ರ ಪ್ರಗತಿಯೊಂದಿಗೆ 3,27,655 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಠೇವಣಿ ಶೇ. 5.55ರ ಪ್ರಗತಿಯೊಂದಿಗೆ 1,87,707 ಕೋಟಿ ರೂ. ಹಾಗೂ ಮುಂಗಡ ಶೇ. 13.29ರ ಹೆಚ್ಚಳದೊಂದಿಗೆ 1,39,947 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.

corp_press_meet_4 corp_press_meet_5 corp_press_meet_2 corp_press_meet_3

ಆದರೆ ಕಳೆದ ಸಾಲಿನ 9 ತಿಂಗಳಿನ ನಿರ್ವಹಣಾ ಲಾಭವನ್ನು ಅವಲೋಕಿಸಿದಾಗ ಪ್ರಸಕ್ತ ಹಣಕಾಸು ವರ್ಷದ 9 ತಿಂಗಳ ನಿರ್ವಹಣಾ ಲಾಭದಲ್ಲಿ ಕುಸಿತವಾಗಿದೆ. ಪ್ರಸಕ್ತ ಅವಧಿಯಲ್ಲಿ ಬ್ಯಾಂಕ್‌ನ ನಿರ್ವಹಣಾ ಲಾಭ ಶೇ. 14.18ರ ಕುಸಿತದೊಂದಿಗೆ 2062.08 ಕೋಟಿ ರೂ. ದಾಖಲಿಸಿದೆ. ಕಳೆದ ಅವಧಿಯಲ್ಲಿ ಇದು 2402.85 ಕೋಟಿ ರೂ. ಆಗಿತ್ತು.

ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ಆದಾಯ ಶೇ. 5.30ರ ಪ್ರಗತಿಯೊಂದಿಗೆ 5,209.55 ಕೋಟಿ ರೂ.ಗೆ ಏರಿಕೆಯಾಗಿದೆ. ಬಡ್ಡಿ ಆದಾಯ 4,88.27 ಕೋಟಿ ರೂ. ಆಗಿದೆ. ನಿವ್ವಳ ಬಡ್ಡಿ ಆದಾಯ 1029 ಕೋಟಿ ರೂ. ಆಗಿದೆ. ಬ್ಯಾಂಕ್ ಆದ್ಯತಾ ವಲಯಕ್ಕೆ 59,570 ಕೋಟಿ ರೂ. ಸಾಲ ವಿತರಿಸಿದೆ. ಇದರಲ್ಲಿ ಕೃಷಿ ವಲಯಕ್ಕೆ 18,749 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕ್ ವತಿಯಿಂದ 78,217 ಹೊಸ ಕಿಸಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸಣ್ಣ ಮತ್ತು ಮದ್ಯಮ ವಲಯದ ಕೈಗಾರಿಕೆ ಕ್ಷೇತ್ರಕ್ಕೆ 25,720 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರಧಾನಮಂತ್ರಿ ಜನಧನ್ ಯೋಜನೆ ಅಡಿಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಮೊತ್ತ ಮೊದಲ ಬಾರಿಗೆ ಶೇ. 100 ಪ್ರಗತಿ ದಾಖಲಿಸಿ ಸಾಧನೆ ಮಾಡಿದೆ. ವಿತ್ತೀಯ ಸೇರ್ಪಡೆ ಅಡಿಯಲ್ಲಿ 34.74 ಲಕ್ಷ ಉಳಿತಾಯ ಖಾತೆಗಳನ್ನು ತೆರೆದು 160.24 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ಬನ್ಸಾಲ್ ಹೇಳಿದರು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಮರ್‌ಲಾಲ್ ದೌಲ್ತಾನಿ, ಬಿ.ಕೆ. ಶ್ರೀವಾಸ್ತವ್, ಜನರಲ್ ಮ್ಯಾನೇಜರ್ ಸಿ.ಜಿ. ಪಿಂಟೋ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment