ಮಂಗಳೂರು,ಫೆ.02: ಗೋರ್ಕಣನಾಥ ಕಾಲೇಜು ಮಂಗಳೂರು ಇವರ ಹಳೆ ವಿಧ್ಯಾರ್ಥಿ ಸಂಘದ ವಾರ್ಷಿಕೋತ್ಸವವು ಇದೇ ಬರುವ ಫೆ.13ರಂದು ನಡೆಯಲಿದ್ದು ಈ ಪ್ರಯುಕ್ತ ಅಯೋಜಿಸಲಾದ ಕ್ರೀಡಾಕೂಟವನ್ನು ದಿನಾಂಕ 01-02-2015 ನೇ ಭಾನುವಾರ ಕಾಲೇಜಿನ ದೈಹಿಕ ನಿರ್ದೇಶಕ ( ಪಿ.ಡಿ) ಪುರುಷೋತ್ತಮ ಪೂಜಾರಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೋಳುವುದರಿಂದ ನಮ್ಮ ಆರೋಗ್ಯವನ್ನು ಉತ್ತಮ ಪಡಿಸಲು ಸಹಕಾರಿಯಾಗುತ್ತದೆ. ಜೊತೆಗೆ ಕ್ರೀಡೆಯಿಂದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಯಾವುದೇ ಸಂಘಟನೆಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಸಮಾಜವನ್ನು ಅಭಿವೃದ್ಧಿ ಪತದತ್ತ ಕೊಂಡ್ಯೊಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಹಳೇ ವಿಧ್ಯಾರ್ಥಿ ಸಂಘವು ಸಮಾಜದ ಒಳಿತಿಗಾಗಿ ಉತ್ತಮ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಪುರೋತ್ತಮ ಪೂಜಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಕಾಲೇಜಿನ ಬೆನ್ನೆಲುಬಾಗಿ ಮಹತ್ತರವಾದ ಕೆಲಸ ಮಾಡುತ್ತಿರುವ ಹಳೇ ವಿಧ್ಯಾರ್ಥಿ ಸಂಘಕ್ಕೆ ಸದಾ ನಮ್ಮ ಕಾಲೇಜಿನ ಬೆಂಬಲ ಇದೆ ಎಂದು ಪೂಜಾರಿ ಹೇಳಿದರು.
ಕಾಲೇಜಿನ ಉಪನ್ಯಾಸಕರಾದ ಪ್ರೋ. ರೇಣುಕ ಹಾಗೂ ಯತೀಶ್ ಅಮೀನ್ ಅತಿಥಿಗಳಾಗಿದ್ದರು.
ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಬಿ, ಉಪಾಧ್ಯಕ್ಷರುಗಳಾದ ಸುನೀಲ್ ದತ್ತ್ ಪೈ, ನಂದಗೋಪಾಲ್ ಶೆಣೈ, ಕೋಶಾಧಿಕಾರಿ ಧನಂಜಯ ನಾಯಕ್, ಸದಸ್ಯರಾದ ಸಂದೀಪ್, ದಿನೇಶ್,ಅವಿನಾಶ್, ಪ್ರಸನ್ನ, ಸಂಜಯ್, ಚಿರಂಜೀವಿ, ಗುರುದತ್ತ್ ಕಾಮತ್, ನಯೀಮ್ ಬಾಜಿ, ವರದ್ ರಾಜ್, ರಾಜೇಶ್, ಅಶೋಕ್, ದಿವ್ಯಾ, ಪ್ರಶಾಂತ್, ವಿಜಯ್ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.
ದಿನೇಶ್ ಕಲ್ಲಡ್ಕ ಸ್ವಾಗತಿಸಿದ್ದರು, ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ, ವಂದಿಸಿದರು.














1 Comment
Wow… Nice to see the friends refreshing their skills. Hats off to the organisers. Best wishes for the annual day function.