ಕನ್ನಡ ವಾರ್ತೆಗಳು

ಯಕ್ಷ ಕಲಾವಿದರಿಂದ “ಸ್ವಚ್ಚ ಭಾರತ” ಯಕ್ಷಗಾನ ಪ್ರದರ್ಶನ.

Pinterest LinkedIn Tumblr

yakshgana_new_photo_1

ಮಂಗಳೂರು,ಜ.27 : ಭಾರತ ಸರ್ಕಾರದ ಗೀತೆ ಮತ್ತು ನಾಟಕ ವಿಭಾಗದ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನಲ್ಲಿ ‘ಸ್ವಚ್ಛ ಭಾರತ’ ವಿಷಯದ ಬಗ್ಗೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀಯುತರಾದ ಮೊಯಿದಿನ್ ಬಾವರವರು ದೀಪ ಬೆಳಗಿಸಿ ಚಂಡೆ ಬಾರಿಸಿ ಚಾಲನೆ ನೀಡಿದರು.

yakshgana_new_photo_3a yakshgana_new_photo_2ayakshgana_new_photo_4

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಜಮೋಹನ್ ರಾವ್, ರಾ. ಸೇ. ಯೋಜನೆಯ ಯೋಜನಾಧಿಕಾರಿ ಮಾರ್ಸೆಲ್ ಲೂಯೀಸ್ ಮತ್ತು ರೋಟರಿ ಕ್ಲಬ್‌ನ ಸದಸ್ಯರು, ಯಕ್ಷದೇಗುಲದ ಕಲಾವಿದರು ವೇದಿಕೆಯಲ್ಲಿದ್ದರು. ಮುಂದೆ ಈ ಯಕ್ಷಗಾನ ಕಾರ್ಯಕ್ರಮ ತಡಂಬೈಲ್, ಕೋಡಿಕೆರೆ, ಕಾಟಿಪಳ್ಳ ಮತ್ತು ಚೇಳಾರಿನಲ್ಲಿ ಕೂಡ ನಡೆಯಲಿದೆ.

Write A Comment