ಕನ್ನಡ ವಾರ್ತೆಗಳು

ಕುಲಶೇಖರ ವೀರ ನಾರಾಯಣ ದೇವಸ್ಥಾನದ ಜೀರ್ಣೋದ್ದಾರದ ಸಭೆ – ಶ್ರೀ ಕ್ಷೇತ್ರ ಜಿಲ್ಲೆಯಲ್ಲಿ ವೈಶಿಷ್ಠತೆಯನ್ನು ತರಲಿ – ಮಾಣಿಲ ಶ್ರೀ

Pinterest LinkedIn Tumblr

mumbai_phot_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ದ ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಕೆಲಸ ಕಾರ್ಯದ ಬಗ್ಗೆ ಪೂರ್ವ ಭಾವೀ ಸಭೆ ಜ. 18 ರಂದು ದೇವಸ್ಥಾನದ ಸಭಾಭವನದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮಿಜಿಯ ಉಪಸ್ಥಿತಿಲ್ಲಿ ನಡೆಯಿತು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳಲಿರುವ ಶ್ರೀ ಕ್ಷೇತ್ರದ ಈ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮುಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಮಾಜ ಭಾಂದವರು, ಭಕ್ತರೆಲ್ಲರ ಸಹಕಾರ ಈ ಮಹೋನ್ನತ ಕಾರ್ಯಕ್ಕೆ ಅಗತ್ಯವಾಗಿದೆ. ದೇವಸ್ಥಾನದ ಜೀರ್ಣೋದ್ದಾರದೊಂದಿಗೆ ಕುಲಾಲ ಸಮಾಜದ ಮುಂದಿನ ಪ್ರಗತಿಗೆ ಪೂರಕವಾಗಲಿ ಎಂದರು.

ಆಶ್ರೀರ್ವಚನ ನೀಡಿದ ಮಾಣಿಲ ಶ್ರೀ ಯವರು ಪ್ರಸ್ತುತ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಎಲ್ಲಾ ಕಾರ್ಯಗಳು ಸುಸಾಂಗವಾಗಿ ನಡೆಯಲಿದೆ. ಭಕ್ತರೆಲ್ಲರೂ ದೇಣಿಗೆಯ ಮೂಲಕ ಜಿಲ್ಲೆಯಲ್ಲಿ ವೈಶಿಷ್ಠತೆಯ ಕ್ಷೇತ್ರವಾಗಿ ಬೆಳಗುವಂತಾಗಲು ಭಕ್ತರೆಲ್ಲರೂ ಸಹಾಯ ಹಸ್ತ ನೀಡ ಬೇಕೆಂದರು.

ವೇದಿಕೆಯಲ್ಲಿ ಸಂಘದ ಆಡಳಿತದ ದೇವಿ ದೇವಸ್ಥಾನದ ಆಡಳಿತ ಅಧ್ಯಕ್ಷ ಶ್ರೀನಿವಾಸ ಪಡೀಲ್, ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ವೀರ ನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕುಲಾಲ ಅಢ್ಯಾರ ಕಟ್ಟೆ ಹಾಗೂ ರೂಪಾ ಗೋಪಾಲ ಸಾಲ್ಯಾನ್ ಉಪಸ್ಥಿತರಿದ್ದರು.

ಸಭೆಯಲ್ಲಿ ಉಪಸ್ಥಿತರಿದ್ದ ಭಕ್ತರ ಪರವಾಗಿ ಮಂಜಪ್ಪ ಬಿಜೈ, ಜೆ. ಆರ್. ಬಂಗೇರ ಬೆಂಗಳೂರು, ನ್ಯಾಯವಾದಿ ರಾಮ್ ಪ್ರಸಾದ್ ಎಸ್. , ಕುಲಾಲ್ ಪ್ರಸ್ತಿಸ್ಥಾನದ ಆಡಳಿತ ಟ್ರಸ್ಟಿ ಸುರೇಶ್ ಕುಲಾಲ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ರಾಜೇಂದ್ರ ಕುಮಾರ್ ಅಳಪೆ, ಸ್ವಾಗತಿಸಿದರು. ಕ್ಷೇತ್ರದ ಕಾರ್ಯದರ್ಶಿ ನ್ಯಾ. ರವೀಂದ್ರ ಮುನ್ನಿಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪ್ರಸಾದ್ ಕುಲಾಲ್ ಸಿದ್ದಕಟ್ಟೆ, ಚಂದ್ರಹಾಸ ಕುಲಾಲ್ ಜಪ್ಪಿನ ಮೊಗೆರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಭೆಯಲ್ಲಿ ಕುಲಾಲ ಸಮಾಜದ ಗಣ್ಯರಾದ ದಯಾನಂದ ಅಡ್ಯಾರ್, ನ್ಯಾ. ಲಕ್ಷ್ಮಣ್ ಕುಂದರ್, ಡಾ. ಆಣ್ಣಯ್ಯ ಕುಲಾಲ್, ಡಾ. ಜಯರಾಜ್ ಪ್ರಕಾಶ್, ಎಂ. ಆರ್. ನಾರಾಯಣ್, ಪ್ರೇಮಾನಂದ ಕುಲಾಲ್, ಬಾಬು ಮೂಲ್ಯ ಉಪಸ್ಥಿತರಿದ್ದರು.

Write A Comment