ಕನ್ನಡ ವಾರ್ತೆಗಳು

ಹುಬ್ಬಳ್ಳಿ-ವಿಜಯವಾಡ ಎಕ್ಸ್‌ಪ್ರೆಸ್ ರೈಲು ನಿತ್ಯ ಸಂಚಾರ ವೇಳಾಪಟಿ ಪ್ರಕಟ.

Pinterest LinkedIn Tumblr

TRAIN1_2210690g

ಕೊಪ್ಪಳ, ಜ. 21:  ಜಿಲ್ಲೆ ಮಾರ್ಗವಾಗಿ ವಾರಕ್ಕೆ ಮೂರು ದಿನ ಓಡುತ್ತಿದ್ದ ಹುಬ್ಬಳ್ಳಿ-ವಿಜಯವಾಡ ಎಕ್ಸ್‌ಪ್ರೆಸ್ ರೈಲು ಜ. 26ರಿಂದ ನಿತ್ಯ ಸಂಚರಿಸಲಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಕಳೆದ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. ಭರವಸೆ ಈಡೇರಿಸಿರುವ ಕೇಂದ್ರ ಸರ್ಕಾರ ನಿತ್ಯ ಸಂಚರಿಸುವ ರೈಲಿನ ಬದಲಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ವಿಜಯವಾಡದಿಂದ ರಾತ್ರಿ 7.45ಕ್ಕೆ ಹೊರಡುವ ರೈಲು (ಸಂ. 17225) ಬೆಳಗ್ಗೆ 5.40ಕ್ಕೆ ಗುಂತಕಲ್, 6.53ಕ್ಕೆ ಬಳ್ಳಾರಿ, 7.30ಕ್ಕೆ ತೋರಣಗಲ್, 8.15ಕ್ಕೆ ಹೊಸಪೇಟೆ, 8.35ಕ್ಕೆ ಮುನಿರಾಬಾದ್, 8.55ಕ್ಕೆ ಕೊಪ್ಪಳ, 10.08ಕ್ಕೆ ಗದಗ, 10.25ಕ್ಕೆ ಅಣ್ಣಿಗೇರಿ ಮೂಲಕ ಬೆಳಗ್ಗೆ 11.20ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ.

ನಿತ್ಯ ಮಧ್ಯಾಹ್ನ 1.30 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು (ಸಂ. 17226) ಮಧ್ಯಾಹ್ನ 2 ಗಂಟೆಗೆ ಅಣ್ಣಿಗೇರಿ, 2.25 ಕ್ಕೆ ಗದಗ, 3.30ಕ್ಕೆ ಕೊಪ್ಪಳ, 3.53 ಕ್ಕೆ ಮುನಿರಾಬಾದ್, 4.05 ಕ್ಕೆ ಹೊಸಪೇಟೆ, 4.45 ಕ್ಕೆ ತೋರಟಗಲ್, 5.25 ಕ್ಕೆ ಬಳ್ಳಾರಿ, 6.35 ಕ್ಕೆ ಗುಂತಕಲ್ ಮಾರ್ಗದಲ್ಲಿ ಮುಂದುವರಿಯಲಿದೆ. ಮರುದಿನ ಬೆಳಗ್ಗೆ 5.15 ಕ್ಕೆ ವಿಜಯವಾಡ ತಲುಪಲಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಯ ಸಹಕಾರಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Write A Comment