ಕನ್ನಡ ವಾರ್ತೆಗಳು

ಅಕ್ರಮ ಕೇಸರಿ ಸಾಗಾಟದ ಆರೋಪಿ ಸೆರೆ : ಸುಮಾರು 12.72 ಲಕ್ಷ ರೂ. ಮೌಲ್ಯದ ಕೇಸರಿ ವಶ

Pinterest LinkedIn Tumblr

saffaran_sezed_airport_1

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೇಸರಿಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪದಲ್ಲಿ ಒಬ್ಬ ಆರೋಪಿಯನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

saffaran_sezed_airport_2

ಕಾಸರಗೋಡು ಮೊಗ್ರಾಲ್ ಪುತ್ತೂರು ನಿವಾಸಿ ಮೊಹಮ್ಮದ್ ರಿಯಾಜ್ ಬಂಧಿತ ಆರೋಪಿ. ಈತ ಶುಕ್ರವಾರ ಬೆಳಗ್ಗೆ ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರಿಗೆ ಬಂದಿದ್ದ ಸಂದರ್ಭ ಸುಮಾರು 12.72 ಲಕ್ಷ ರೂ. ಮೌಲ್ಯದ 10.60 ಕೆ.ಜಿ. ಕೇಸರಿಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ. ಈ ಬಗ್ಗೆ ಅನುಮಾನಗೊಂಡ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಬ್ಯಾಗ್ ತಪಾಸಣೆ ನಡೆಸಿದಾಗ ತಲಾ 25 ಗ್ರಾಂ ತೂಕದ 424 ಪ್ಯಾಕ್ ಕೇಸರಿ ಪತ್ತೆಯಾಗಿದೆ.

saffaran_sezed_airport_3

saffaran_sezed_airport_4

ಮಂಗಳೂರು ವಿಮಾನ ನಿಲ್ದಾಣದ ಸಹಾಯಕ ಆಯುಕ್ತ ಎನ್.ಉದಯಶಂಕರನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ನಿಲ್ದಾಣದ ಕಸ್ಟಮ್ಸ್ ಆಯುಕ್ತ ಡಿ.ಪುರುಷೋತ್ತಮ ಅವರಿಗೆ ಹಸ್ತಾಂತರಿಸಲಾಗಿದೆ.

Write A Comment