ಮಾಸ್ಕೊ, ಜ.14: ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ಇತ್ತೀಚೆಗೆ ‘ಚಾರ್ಲಿ ಹೆಬ್ಡೊ’ ಪತ್ರಕರ್ತರ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆಸಿರುವುದು ಅಮೆರಿಕದ ಬೇಹು ಗಾರಿಕೆ ಸಂಸ್ಥೆಗಳ ಕಾರ್ಯವಾಗಿದೆ ಎಂದು ರಶ್ಯದ ಪ್ರಮುಖ ಟಿವಿ ಸುದ್ದಿವಾಹಿನಿಯೊಂದು ತನ್ನ ಕಾರ್ಯಕ್ರಮವೊಂದರಲ್ಲಿ ಹೇಳಿದೆ.
ಟಿವಿ ವಾಹಿನಿಯು ನಿಯಮಿತವಾಗಿ ಓರ್ವ ಅತಿಥಿ ಹಾಗೂ ತಜ್ಞ ರಾಜಕೀಯ ವಿಶ್ಲೇಷಕರನ್ನು ಸೇರಿಸಿಕೊಂಡು ಪ್ರಸಾರಿಸುವ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಗೊಂಡಿದೆ.
ಭಯೋತ್ಪಾದನೆಯ ವಿರುದ್ಧದ ಜಾಗತಿಕ ಯತ್ನವನ್ನು ನಿರರ್ಥಕಗೊಳಿಸುವ ಉದ್ದೇಶದಿಂದ ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳು ‘ಚಾರ್ಲಿ ಹೆಬ್ಡೊ’ ಮೇಲೆ ದಾಳಿ ನಡೆಸಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿ ಅಲೆಕ್ಸಿ ಮಾರ್ಟಿನೊವ್ ಅಭಿಪ್ರಾಯಿಸಿದ್ದಾರೆ.
ರಶ್ಯದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಹೇರುವಲ್ಲಿ ್ರಾನ್ಸ್ನ ಅಧ್ಯಕ್ಷ ್ರಾಂಕೊಯಿಸ್ ಹೊಲಾಂಡ್ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮಾರ್ಟಿನೊವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹತ್ತು ನಿಮಿಷಗಳ ಈ ಕಾರ್ಯಕ್ರಮದಲ್ಲಿ ಮಾರ್ಟಿ ನೊವ್ ವ್ಯಕ್ತಪಡಿಸಿದ ಅಭಿಪ್ರಾಯಗಳು ವಾಸ್ತವ ದಂತೆ ಪ್ರಕಟಗೊಂಡಿದ್ದು, ಅವುಗಳ ವಿರುದ್ಧ ಯಾವುದೇ ಪ್ರತಿಸವಾಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.
ಕಾರ್ಯಕ್ರಮದ ವೀಡಿಯೊ ದಾಖಲೆಯನ್ನು ಲ್ೈನ್ಯೂಸ್ನ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ಯಾರಿಸ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ನೇತೃತ್ವದಲ್ಲಿ ನಡೆದಿದೆ ಎಂದು ರಾಜಕೀಯ ವಿಶ್ಲೇಷಕ ಅಲೆಕ್ಸಿ ಮಾರ್ಟಿನೊವ್ ಸಮರ್ಥಿಸಿಕೊಂಡಿದ್ದಾರೆ. ಲ್ೈನ್ಯೂಸ್ ವಾಹಿನಿಯು ಸರಕಾರಿ ಮಾಧ್ಯಮವಲ್ಲವಾದರೂ, ಅದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪರವಾಗಿರುವುದು ಸ್ಪಷ್ಟವಾಗಿದೆ.
