ಹೊಸದಿಲ್ಲಿ, ಜ.14: ಅಂಟಾರ್ಟಿಕ ಸಾಗರದಲ್ಲಿ 1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 1.4 ಮೈಲು ದೂರವನ್ನು 52 ನಿಮಿಷದಲ್ಲಿ ಕ್ರಮಿಸಿದ ಭಾರತದ ಓಪನ್ ವಾಟರ್ ಸ್ವಿಮ್ಮರ್ ಭಕ್ತಿ ಶರ್ಮ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಭಕ್ತಿ ಅವರು ಬ್ರಿಟನ್ ಓಪನ್ ವಾಟರ್ ಸ್ವಿಮ್ಮರ್ ಲೂವಿಸ್ ಪ್ಯೂಗ್ ಹಾಗೂ ಅಮೆರಿಕದ ಈಜುಗಾರ ಲಿನ್ ಕಾಕ್ಸ್ ದಾಖಲೆಯನ್ನು ಮುರಿದಿದ್ದಾರೆ ಎಂದು ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ. ಭಕ್ತಿ ಈ ಸಾಧನೆ ಮಾಡಿದ ವಿಶ್ವದ ಕಿರಿಯ ಯುವತಿ ಹಾಗೂ ಏಷ್ಯದ ಮೊದಲ ಯುವತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
‘‘ಅಪರೂಪದ ಸಾಧನೆ ಮಾಡಿರುವ ಭಕ್ತಿ ಶರ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಾಗುತ್ತಿದೆ. ಇಡೀ ದೇಶ ಅವರ ಸಾಧನೆಯಿಂದ ಹೆಮ್ಮೆ ಪಡುತ್ತಿದೆ. ಭಕ್ತಿಯ ಸಾಧನೆ ಹುಡುಗಿಯರು ಸ್ವಿಮ್ಮಿಂಗ್‌ನಲ್ಲಿ ಸೇರ್ಪಡೆಯಾಗಲು ಸ್ಫೂರ್ತಿಯಾಗಿದೆ. ಭಕ್ತಿಯ ಸಾಧನೆಯು ಸರಿಯಾದ ಬೆಂಬಲ ಹಾಗೂ ಅವಕಾಶ ಲಭಿಸಿದರೆ ಭಾರತ ಇಂತಹ ಮತ್ತಷ್ಟು ಪ್ರತಿಭೆಯನ್ನು ಹೊರತರಲಿದೆ ಎಂದು ತೋರಿಸಿಕೊಟ್ಟಿದೆ’’ ಎಂದು ಹಿಂದೂಸ್ತಾನ್ ಝಿಂಕ್ ಸಿಇಒ ಅಖಿಲೇಶ್ ಜೋಶಿ ಹೇಳಿದ್ದಾರೆ.
2010ರಲ್ಲಿ ಟೆನ್‌ಝಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಪುರಸ್ಕೃತೆ ಭಕ್ತಿ ತನಗೆ ಬೆಂಬಲವಾಗಿ ನಿಂತಿದ್ದ ಉದಯಪುರ ಮೂಲದ ಹಿಂದೂಸ್ಥಾನ್ ಝಿಂಕ್ ಕಂಪೆನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ 10 ವರ್ಷಗಳಿಂದ ಓಪನ್ ವಾಟರ್ ಈಜಿನಲ್ಲಿ ತೊಡಗಿ ಸಿಕೊಂಡಿರುವ ಭಕ್ತಿ ಸ್ವಿಮ್ಮಿಂಗ್‌ನಿಂದ ವಿಮುಖರಾಗಲು ಬಯಸಿದ್ದಾಗ ಹಿಂದೂಸ್ಥಾನ್ ಝಿಂಕ್ ಅವರ ಬೆಂಬಲಕ್ಕೆ ನಿಂತಿತ್ತು.
