ಕನ್ನಡ ವಾರ್ತೆಗಳು

ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಲು ತುಳು ಭಾಷೆ ಪೂರಕ : ಡಾ| ಪ್ರಭಾಕರ ಭಟ್, ಕಲ್ಲಡ್ಕ.

Pinterest LinkedIn Tumblr

kaladka_tulu_photo

ಮಂಗಳೂರು,ಡಿ.18: ನಮ್ಮ ಮಾತೃತನದ ಭಾವ ಉಳಿಯಲು, ಸಂಬಂಧಗಳು ಬೆಸೆದುಕೊಂಡು ಉಳಿಯಲು ತುಳು ಸಂಸ್ಕೃತಿಯಲ್ಲಿ ಅವಕಾಶವಿದೆ. ಆದರಿಂದ ನಾವು ವಿದೇಶಿ ಅನುಕರಣೆಯಿಂದಾಗಿ ನಮ್ಮ ಮಾತೆಯನ್ನು ಮರೆಯುತ್ತಿದ್ದೇವೆ. ಸಂಬಂಧಗಳನ್ನು ದೂರೀಕರಿಸಿ ಸಂಕೀರ್ಣವಾಗುತ್ತಿದ್ದೇವೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.

ಶ್ರೀ ಕ್ಷೇತ್ರ ಗರೋಡಿಯಲ್ಲಿ ನಡೆದ ತುಳು ತಾಳಮದ್ದಲೆ ಪರ್ಬದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತುಳು ಭಾಷೆಯಲ್ಲೇ ತುಳು ತಾಳಮದ್ದಲೆ ನಡೆದದ್ದು ಅತ್ಯಂತ ಉತ್ತಮವಾದ ಕಾರ್ಯ. ತುಳು ಭಾಷೆಯನ್ನು ಬೆಳೆಸುವುದರಿಂದ, ಅನುಸರಿಸುವುದ ರಿಂದ ನಮ್ಮಲ್ಲಿ ಮಣ್ಣಿನ ಬಗ್ಗೆ, ನಮ್ಮ ಹಿರಿಯರ ಬಗ್ಗೆ ಅತೀವ ಗೌರವ, ಭಕ್ತಿ ಹೆಚ್ಚುತ್ತದೆ. ಸಂಬಂಧಗಳು ಈ ಮಣ್ಣಿನೊಂದಿಗೇ ಬೆಸೆದು ಹೋಗುತ್ತದೆ. ತುಳು ಭಾಷೆಯ ಸತ್ತ್ವ ಬೆಳೆಯುತ್ತದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕ್ಯಾ| ಗಣೇಶ್ ಕಾರ್ನಿಕರು ಸಮಾರಂಭಕ್ಕೆ ಶುಭ ಕೋರಿದರು. ಆಶೀರ್ವಚನವನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮಕ್ಷೇತ್ರ ಧರ್ಮಸ್ಥಳದವರು ನೀಡಿದರು. ಪ್ರೊ| ಎಂ.ಬಿ. ಪುರಾಣಿಕ್, ಬಿಲ್ಲವ ಸೇವಾ ಸಂಘ, ಬಂಟ್ವಾಳದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್, ತಾರಾನಾಥ ಶೆಟ್ಟಿ ಬೋಳಾರ, ವಾಸು ಶಾಂತಿ, ಪೂವಪ್ಪ ಶಾಂತಿ, ಗರೋ ಡಿಯ ಅಧ್ಯಕ್ಷರಾದ ಚಿತ್ತರಂಜನ್, ಚಂದ್ರಶೇಖರ ಸುವರ್ಣ, ದೋಗ್ರ ಪೂಜಾರಿ, ಸ್ಮಾರಕ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ದಾಮೋದರ ನಿಸರ್ಗ ಬಿ., ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಯೋಜಕ ರಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗರವರು ಶುಭ ಹಾರೈಸಿದರು.90 ವರ್ಷಗಳಿಂದ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿರುವ ‘ಶ್ರೀ ಜಗದಂಬಿಕಾ ಯಕ್ಷಗಾನ ಮಂಡಳಿ ಉರ್ವ ಮಾರಿಗುಡಿ’ ಸಂಸ್ಥೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡಳಿ ಪರವಾಗಿ ಅಶೋಕ್ ಬಿ. ಎನ್. ಸನ್ಮಾನ ಸ್ವೀಕರಿಸಿದರು. ತುಳು ತಾಳಮದ್ದಲೆ ಪರ್ಬ ಸಮಿತಿಯ ಸಂಯೋಜಕರಾದ ರವಿ ಅಲೆವೂರಾಯ ವರ್ಕಾಡಿಯವರು ಈ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ಎಚ್.ಪಿ. ರೂಪಾ ರಾಧಾಕೃಷ್ಣ ರಾವ್ ಸನ್ಮಾನ ಪತ್ರ ವಾಚಿಸಿದರು. ಸುಧಾಕರ ರಾವ್ ಪೇಜಾವರರು ಧನ್ಯವಾದವಿತ್ತರು. ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ‘ಕೋಟಿ ಚೆನ್ನಯ’ ಪ್ರಸಂಗದ ಪ್ರಸ್ತುತಿಯೂ ನಡೆಯಿತು.

Write A Comment