ಮಂಗಳೂರು,ಡಿ.11: ಅಖಿಲ ಭಾರತ ತುಳು ಒಕ್ಕೂಟ ಇದರ ಬೆಳ್ಳಿಹಬ್ಬದ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಡಿಸೆಂಬರ್ 12 ರಿಂದ 14 ರವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬದಲ್ಲಿ ಡಿಸೆಂಬರ್ 12ರಂದು ಸಂಜೆ 7 ಗಂಟೆಯಿಂದ ರಾತ್ರಿ 10 ರ ವರೆಗೆ ಎಸ್.ಯು.ಪಣಿಯಾಡಿ ವೇದಿಕೆಯಲ್ಲಿ `ತುಳು ಸಿನೆಮಾ ಪದರಂಗಿತ’ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.ರಾಗಧ್ವನಿ ಸಂಗೀತ ತಂಡದ ಸಂಚಾಲಕ ಮುರಳೀಧರ ಕಾಮತ್ ತಂಡದಿಂದ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಹಳೆಯ ಮತ್ತು ಹೊಸ ಸಿನಿಮಾದ ಹಾಡುಗಳನ್ನು ಜಿಲ್ಲೆಯ ಖ್ಯಾತ ಗಾಯಕರು ಹಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿನೆಮಾ ಕ್ಷೇತ್ರದಲ್ಲಿ ದುಡಿದಿರುವ ಕಲಾವಿದರು, ತಂತ್ರಜ್ಞರು, ಸಾಹಿತಿಗಳು, ನಿರ್ದೇಶಕರು, ನಿರ್ಮಾಪಕರ ಪರಿಚಯವನ್ನು ಕಾರ್ಯಕ್ರಮ ಸಂಯೋಜಕರಾದ ವಿ.ಜಿ.ಪಾಲ್ ಮತ್ತು ತಮ್ಮಲಕ್ಷ್ಮಣ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿನಿಮಾ ಕ್ಷೇತ್ರದಲ್ಲಿ ದುಡಿದಿರುವ ಕಲಾವಿದರು, ತಂತ್ರಜ್ಞರು ಹಾಗೂ ಸಿನಿಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವ ತುಳುವೆರೆ ಪರ್ಬ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
