Entertainment

ಶರ್ಮಿಳಾ ಪುತ್ರಿ ಸೋಹಾ ಮದುವೆ ಡೇಟ್ ಘೋಷಣೆ

Pinterest LinkedIn Tumblr

Soha-Ali-Khan-Kunal-Khemu

ಮಾಜಿ ಕ್ರಿಕೆಟರ್ ನವಾಬ್ ಪಟೌಡಿ – ಮಾಜಿ ನಟಿ ಶರ್ಮಿಳಾ ಅವರ ಪುತ್ರಿ ಸೋಹಾ ಅಲಿ ಖಾನ್ ಅವರು ಕುನಾಲ್ ಖೇಮು ಜತೆ ಲಿನ್ ಇನ್ ಸಂಬಂಧದಲ್ಲಿರುವುದು ಗುಟ್ಟಾದ ವಿಷಯವೇನಲ್ಲ. ಇಬ್ಬರು ಒಂದಲ್ಲ ಒಂದು ದಿನ ಮದುವೆಯಾಗುತ್ತಾರೆ ಎಂಬ ನಂಬಿಕೆ ಬಾಲಿವುಡ್ ಮಂದಿಗಿದೆ.ಈ ನಂಬಿಕೆ ಈಗ ನಿಜವಾಗಿದೆ,

ಇಬ್ಬರ ಮದುವೆ ಡೇಟ್ ಘೋಷಿಸಲಾಗಿದೆ. ಬಾಲಿವುಡ್ ನ ಗಣ್ಯರು, ಉದ್ಯಮಿಗಳು, ಸಿನಿತಾರೆಯ ಮದುವೆ ಎಂದರೆ ಅದು ಇಂದ್ರ ಲೋಕದ ವೈಭೋಗವನ್ನು ಧರೆಗಿಳಿಸಿದ ಅನುಭವ. ಹಿಂದಿ ಚಿತ್ರರಂಗ ಕೇವಲ ಮನರಂಜನೆಯ ಉದ್ಯಮವಾಗಿ ಉಳಿದಿಲ್ಲ. ಸಿನಿತಾರೆಯರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ಪ್ರತಿ ತಾರೆಯರ ಮದುವೆ ವೈಭೋಗದ ಬಗ್ಗೆ ಅವರಿಗೆ ಮಕ್ಕಳಾಗುವವರೆಗೂ ಮಾತನಾಡುವ ಮಂದಿ ಇದ್ದಾರೆ.

ಮದುವೆಯ ಹೊಸ್ತಿಲಲ್ಲಿ ನಿಂತಿರುವ ಜೋಡಿಗಳ ಪಟ್ಟಿಯಲ್ಲಿ ಕತ್ರೀನಾ- ರಣಬೀರ್, ಜಾನ್ ಅಬ್ರಹಾಂ-ಪ್ರಿಯಾ, ಗೀತಾ ಬಸ್ರಾ-ಹರ್ಭಜನ್ ಸಿಂಗ್ ಪ್ರಮುಖವಾಗಿದ್ದು, ಪಟ್ಟಿಯಲ್ಲಿದ್ದ ದಿಯಾ ಮಿರ್ಜಾ- ಸಾಹಿಲ್ ಸಿಂಘ ಮದುವೆ ವೈಭೋಗದಿಂದ ಜರುಗಿದೆ ಈಗ ಸೋಹಾ ಅಲಿಖಾನ್ -ಕುನಾಲ್ ಖೇಮು ಮದುವೆಗೆ ಸಿದ್ಧರಾಗಿದ್ದಾರೆ.

ಬಾಲಿವುಡ್ ನಲ್ಲಿ ಐಶ್ವರ್ಯಾ ರೈ ಬಚ್ಚನ್ -ಅಭಿಷೇಕ್ ಬಚ್ಚನ್ ಮದುವೆ ಇಂದ ಹಿಡಿದು ಹೃತಿಕ್ ರೋಷನ್- ಸೂಜಾನ್ ಮದುವೆ ಕಥೆ ತನಕ ಬಿ- ಟೌನ್ ಮದುವೆ ಬಗ್ಗೆ ಎಲ್ಲರಿಗೂ ಸಹಜ ಕುತೂಹಲ ಇದ್ದೇ ಇರುತ್ತದೆ. ಮದುವೆ ವೈಭೋಗದ ನಂತರದ ಬ್ರೇಕ್ ಅಪ್ ಗಳು, ವಿಚ್ಛೇದನ, ಪರಿಹಾರ ಧನದ ಬಗ್ಗೆ ಚರ್ಚೆಗಳು, ಗಾಸಿಪ್ ಗಳು ಇದ್ದದ್ದೇ. ನಿಶ್ಚಿತಾರ್ಥ ಆಗಿದೆ: ಕಳೆದ ವರ್ಷ ಜುಲೈನಲ್ಲೇ ಇಬ್ಬರ ಮದುವೆ ನಿಶ್ಚಿತಾರ್ಥ ಮುಗಿಸಿದೆ.

ಜನವರಿ 25, 2015ಕ್ಕೆ ಇಬ್ಬರ ಮದುವೆ ನಡೆಯಲಿದೆ ಎಂದು ಎರಡು ಕಡೆ ಕುಟುಂಬದ ಗುರು ಹಿರಿಯರು ನಿಶ್ಚಯಿಸಿದ್ದಾರೆ. ಅದರೆ, ಅದ್ದೂರಿ ಮದುವೆ ನಡೆಯುವ ಸಾಧ್ಯತೆಯಿಲ್ಲ, ಆಪ್ತರು, ಬಂಧು ಮಿತ್ರರ ಸಮ್ಮುಖದಲ್ಲಿ ಸಾಂಪ್ರದಾಯಿಕ ಮದುವೆ ಜರುಗಲಿದೆ. ನಂತರ ಖಾನ್-ಠಾಗೋರ್-ಖೇಮು ಪರಿವಾರ ವಿಜೃಂಭಣೆಯಿಂದ ಆರತಕ್ಷತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Write A Comment