ರಾಷ್ಟ್ರೀಯ

ಇಂದಿರಾ ದಿನಗಳ ಪುಸ್ತಕ ಬರೆದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Pinterest LinkedIn Tumblr

Pranab-Mukherjee.PTI

ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿರುವ ಪುಸ್ತಕ ಡಿಸೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಮಂಗಳವಾರ ಪ್ರಕಾಶಕರು ತಿಳಿಸಿದ್ದಾರೆ.

“ದ ಡ್ರಮಾಟಿಕ್ ಡೆಕೇಡ್: ದ ಇಂದಿರಾ ಇಯರ್ಸ್” (ನಾಟಕೀಯ ದಶಕ:ಇಂದಿರಾ ವರ್ಷಗಳು) ಎಂಬ ಹೆಸರಿನ ಪುಸ್ತಕ ಭಾರತದ ಇತಿಹಾಸದ ಪ್ರಮುಖ ಘಟ್ಟವನ್ನು ಸೆರೆಹಿಡಿಯಲಿದೆ ಎಂದಿರುವ ರೂಪಾ ಪ್ರಕಾಶನ ಸಂಸ್ಥೆ ಡಿಸೆಂಬರ್ ೧೧ ಕ್ಕೆ ಪುಸ್ತಕ ಮಾರುಕಟ್ಟೆಗೆ ಬರಲಿದೆ ಎಂದಿದೆ.

ಈ ಗ್ರಂಥ ಮುಖರ್ಜಿ ಅವರು ೧೯೭೦ ರ ಪ್ರಮುಖ ರಾಜಕೀಯ ಮುಖಂಡರ ಜೊತೆ ನಡೆಸಿರುವ ಸಂಭಾಷಣೆಯ ತಮ್ಮ ದಿನಚರಿಯ ಭಾಗಗಳಿಂದ ಸಿದ್ಧಗೊಂಡಿದೆ ಎನ್ನಲಾಗಿದೆ.

“ಈ ಸಂದರ್ಭದಲ್ಲಿ ಭಾರತ ನಿಜವಾದ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಂಡಿತ್ತು. ಪೂರ್ವ ಪಾಕಿಸ್ತಾನಕ್ಕೆ (ಬಾಂಗ್ಲಾದೇಶ) ತನ್ನ ಬೆಂಬಲವನ್ನು ವಿಸ್ತರಿಸಿ ಸ್ವಾಯತ್ತತೆಗೆ ಇರುವ ತನ್ನ ಬದ್ಧತೆಯನ್ನು ಪ್ರದರ್ಶಿಸಿತ್ತು. ನಂತರ ೧೯೭೫ ರಿಂದ ೧೯೭೭ ರ ತುರ್ತು ಪರಿಸ್ಥಿತಿ ವೇಳೆಯಲ್ಲಿ ಭಾರತ ವೈಯಕ್ತಿಕ ಹಿತಾಸಕ್ತಿಯ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅಂತಿಮವಾಗಿ ೧೯೭೭ ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಲವು ಪಕ್ಷಗಳ ಜೊತೆಗಿನ ಮೈತ್ರಿಯಿಂದ ಜನತಾ ಪಕ್ಷಗಳ ಹೊಂದಾಣಿಕೆಯ ಹೊಸ ಯುಗ ಪ್ರಾರಂಭವಾಯಿತು.” ಎಂದು ಪ್ರಕಾಶಕರು ತಿಳಿಸಿದ್ದಾರೆ.

ವಿದೇಶಾಂಗ, ರಕ್ಷಣೆ ಮತ್ತು ಹಣಕಾಸು ಸಚಿವಾಲಯಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಪ್ರಣಬ್ ಮುಖರ್ಜಿ ೨೧೦೨ ಜುಲೈ ೨೫ ಕ್ಕೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ೧೯೬೯ರಿಂದ ರಾಜ್ಯಸಭೆಗೆ ೫ ಬಾರಿ ಆಯ್ಕೆಯಾಗಿದ್ದ ಪ್ರಣಬ್ ಮುಖರ್ಜಿ ೨೦೦೪ ರಿಂದ ಲೋಕಸಭೆಗೆ ೨ ಬಾರಿ ಆಯ್ಕೆಯಾಗಿದ್ದರು.

Write A Comment