ಕರಾವಳಿ

ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ ಹಾಗೂ ಮ.ನ.ಪಾ ವತಿಯಿಂದ ಸ್ವಚ್ಛತಾ ಅಭಿಯಾನ.

Pinterest LinkedIn Tumblr

kankanady_mcc_cleaness_1

ಮಂಗಳೂರು:ಅ ೨೯ ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಜಂಟಿ ಆಶ್ರಯದಲ್ಲಿ ೨೯.೧೦.೨೦೧೪ ರಂದು ಕಂಕನಾಡಿ ಮಾರುಕಟ್ಟೆಂii ವಠಾರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

kankanady_mcc_cleaness_2akankanady_mcc_cleaness_3 kankanady_mcc_cleaness_4

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಆಯುಕ್ತ ಶ್ರೀ ಗೋಕುಲ್‌ದಾಸ್, ಸ್ಥಳಿಯ ಕಾರ್ಪೊರೇಟರ್ ಶ್ರೀ ನವೀನ್ ಡಿ’ಸೋಜಾ, ಆರೋಗ್ಯಾಧಿಕಾರಿ ಶ್ರೀ ಮಂಜಯ್ಯ ಶೆಟ್ಟಿ, ಪರಿಸರ ಅಭಿಯಂತ ಶ್ರೀ ಮಧು, ಮಹಾನಗರಪಾಲಿಕೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಅಧಿಕಾರಿಗಳು, ಸಂಘದ ಅಧ್ಯಕ್ಷ ಶ್ರೀ ಅಲಿ ಹಸನ್, ಕಾರ್ಯದರ್ಶಿ ಶ್ರೀ ರೋಶನ್ ಪತ್ರಾವೊ, ಕೋಶಾಧಿಕಾರಿ ಶ್ರೀ ಸಾಲಿ, ಉಪಾಧ್ಯಕ್ಷ ಶ್ರೀ ವಸಂತ್ ಟೈಲರ್, ಗೌರವಾಧ್ಯಕ್ಷ ಶ್ರೀ ದೇವದಾಸ್, ಸದಸ್ಯರಾದ ಶ್ರೀಯುತ ಅಬ್ದುಲ್ ಸತ್ತಾರ್, ಧೀರಜ್, ಪುರುಷೋತ್ತಮ, ನವೀನ್, ಅಬ್ಬು, ಬಶೀರ್, ಖಾಲಿದ್, ಹಾಗೂ ಮಹಾನಗರಪಾಲಿಕೆಯ ಪೌರಕಾರ್ಮಿಕರು ಹಾಜರಿದ್ದರು.

kankanady_mcc_cleaness_5akankanady_mcc_cleaness_6

ಅಭಿಯಾನದ ಅಂಗವಾಗಿ ಮಾರುಕಟ್ಟೆಯ ಒಳಾಂಗಣ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ನೇತೃತ್ವದಲ್ಲಿ ಎರಡು ತಿಂಗಳಿಗೊಮ್ಮೆ ಮಾರುಕಟ್ಟೆಯ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಕಾರ್ಪೊರೇಟರ್ ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದರು.

Write A Comment