ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮೇಯರ್ ಹಾಗೂ ಶ್ರೀ ಗಣೇಶ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಮಹಾಬಲ ಮಾರ್ಲರ ಅಧ್ಯಕ್ಷತೆಯಲ್ಲಿ ದೀಪಾವಳಿ ಸಂಭ್ರಮವನ್ನು ಆಚರಿಸಲಾಯಿತು .
ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲರ ಬದುಕಿನಲ್ಲಿಬೆಳಕು ಮೂಡಬೇಕು ಎಂಬುದೇ ದೀಪಾವಳಿ ಆಚರಣೆಯ ಉದ್ದೇಶ ಎಂದು ಲೋಬೋ ಹೇಳಿದರು.
ಕ್ರೆಡೈಮಂಗಳೂರು ಅಧ್ಯಕ್ಷ ಪುಷ್ಪರಾಜಜೈನ್ ಮಾತನಾಡಿಈ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿಮಕ್ಕಳೊಂದಿಗೆ ಇರುವುದುಇದರಅಧ್ಯಕ್ಷ ಮೇಯರ್ಪದಾಧಿಕಾರಿಗಳು ಮತ್ತು ಶಿಕ್ಷಕರ ಪುಣ್ಯಎಂದರು. ಉರ್ವ ಚಿಲಿಂಬಿಯ ಶಿರಿಡಿಯ ಸಾಯಿಬಾಬ ಮಂದಿರದ ವಿಶ್ವಾಸ್ಕುಮಾರ್ದಾಸ್ ಮಾತನಾಡಿ, ಸಾನಿಧ್ಯ ಸಂಸ್ಥೆಗೆ ಸರಕಾರದ ಪ್ರೋತ್ಸಾಹಅಗತ್ಯಎಂದರು. ಉಪಮೇಯರ್ ಕವಿತಾ ವಾಸು ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಸಂತಕುಮಾರಶೆಟ್ಟಿಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಅತಿಥಿಗಣ್ಯರು ಸಾನಿಧ್ಯ ಮಕ್ಕಳ ಜೊತೆಯಲ್ಲಿ ಹಣತೆ ಹಚ್ಚಿ, ವಿವಿಧಪಟಾಕಿಗಳನ್ನು ಸಿಡಿಸಿ ದೀಪಾವಳಿಯ ಸಂಭ್ರಮಗಳನ್ನು ಹಂಚಿಕೊಂಡರು.

