ಕರಾವಳಿ

ಇಂಡಿಯಾ ಬುಡೋಕಾನ್ ಕರಾಟೆ ಚಾಂಪಿಯನ್‌ಶಿಪ್ – 2014 ಉದ್ಘಾಟನಾ ಸಮಾರಂಭ.

Pinterest LinkedIn Tumblr

Karate_championship_starts_1

ಮಂಗಳೂರು, ಅ.16: ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಅ.16ರಿಂದ 19ರವರೆಗೆ ನಡೆಯಲಿರುವ 32ನೆ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಚಾಂಪಿಯನ್‌ಶಿಪ್ -2014 ಇದರ ಉದ್ಘಾಟನೆಯನ್ನು ಮ.ನ.ಪಾ ಮೇಯರ್ ಮಹಬಲ ಮಾರ್ಲರವರು ಗುರುವಾರ ನೆರವೇರಿಸಿದರು.

Karate_championship_starts_2Karate_championship_starts_3 Karate_championship_starts_4

ದೇಶದ 22 ರಾಜ್ಯಗಳಿಂದ ಒಟ್ಟು 2000 ಸ್ಪರ್ಧಿಗಳು ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಬ್ ಜೂನಿಯರ್ (12 ವರ್ಷದೊಳಗಿನ), ಜೂನಿಯರ್ (12- 18 ವಯೋಮಿತಿಯ) ಮತ್ತು ಸೀನಿಯರ್ಸ್‌ (18 ವರ್ಷ ಮೇಲ್ಪಟ್ಟವರು) ವಿಭಾಗಗಳಲ್ಲಿ ಸ್ಪರ್ಧೆ ನಡೆಯುವುದು.ವೈಯುಕ್ತಿಕ ಕಟಾ, ತಂಡ ಕಟಾ, ವೆಪನ್ ಕಟಾ, ವೈಯುಕ್ತಿಕ ಕುಮಿಟೆ ಮತ್ತು ರೊಟೇಶನ್ ಟೀಮ್ ಕುಮಿಟೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯುವುದು.

Karate_championship_starts_6 Karate_championship_starts_5

ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಅವರು ಈ ಬುಡೋಕಾನ್ ಕರಾಟೆ ಚಾಂಪಿಯನ್‌ಶಿಪ್ ನ ವಿಶೇಷ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಎಚ್.ಎಮ್.ಎಸ್ ಮ ಮುಖಂಡ ಸುರೇಶ ಚಂದ್ರ ಶೆಟ್ಟಿ, ಸಿ.ಸಿ.ಪಿ ಇನ್ಸ್ ಪೆಕ್ಟರ್ ವೆಲೆಂಟನ್ ಡಿಸೋಜಾ, ಕಾಂಗ್ರೆಸ್ ಮುಖಂಡ ವಿಶ್ವಾಸ ದಾಸ್, ಸ್ವಾಗತ ಸಮಿತಿಯ ಕಾರ್ಯನಿರ್ವಾಹಕ ಚಯರ್‌ಮೆನ್ ರಾಜರತ್ನ ಸನಿಲ್, ಅಧ್ಯಕ್ಷ ಪ್ರಭಾಕರ ಸುವರ್ಣ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಉಪಸ್ಥಿತರಿದ್ದರು.

Write A Comment