ಬೆಂಗಳೂರು, ಅ. 12: `ವಾರ್ತಾಭಾರತಿ’ ದೈನಿಕದ ಬಹುನಿರೀಕ್ಷಿತ 12ನೆ ವಾರ್ಷಿಕ ವಿಶೇಷಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು.ವಿಶೇಷಾಂಕದ ಮೊದಲ ಪ್ರತಿಯನ್ನು `ವಾರ್ತಾಭಾರತಿ’ಯಓದುಗ ಬಳಗವನ್ನು ಪ್ರತಿನಿಧಿಸಿದ್ದ ವಿಶೇಷ ಅತಿಥಿ ಬೆಂಗಳೂರಿನ ಉಪನ್ಯಾಸಕ ಎಂ.ಮಂಜುನಾಥ್‌ಅವರಿಗೆ ಮುಖ್ಯಮಂತ್ರಿಯವರು ನೀಡಿ ಅಭಿನಂದಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿಕೃಷ್ಣಾದಲ್ಲಿಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾಜಿಉನ್ನತ ಶಿಕ್ಷಣ ಸಚಿವ ಬಿ. ಎ.ಮೊಯ್ದಿನ್, ಮಾಜಿ ಸಂಸದಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ಅಮೀನ್ ಮಟ್ಟು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಬ್ಯಾರೀಸ್‌ಗ್ರೂಪ್‌ನ ನಿರ್ದೇಶಕ ಎ.ಸಿದ್ದೀಕ್ ಬ್ಯಾರಿ, ಮಾಧ್ಯಮಅಕಾಡಮಿಅಧ್ಯಕ್ಷ ಪೊನ್ನಪ್ಪ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷಾಂಕದಲ್ಲಿದ್ದಹಲವು ಖ್ಯಾತ ಲೇಖಕರ ಲೇಖನಗಳನ್ನು ನೋಡಿಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕೆಯ ಬೆಂಗಳೂರು ಬ್ಯುರೋ ಮುಖ್ಯಸ್ಥ ಬಸವರಾಜು , ಹಿರಿಯ ವರದಿಗಾರ ಪ್ರಕಾಶ ರಾಮಜೋಗಿಹಳ್ಳಿ ಉಪಸ್ಥಿತರಿದ್ದರು.














