ಕರಾವಳಿ

ಮಂಗಳೂರಿನಲ್ಲಿ ದೇವಾಡಿಗರ ಬೃಹತ್ ವಧು-ವರ ಅನ್ವೇಷಣಾ ಸಮಾವೇಶ

Pinterest LinkedIn Tumblr
Devadiga_Mariege_samavesa
ಮಂಗಳೂರು, ಅ.09 : ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಅದರ ವತಿಯಿಂದ ಬೃಹತ್ ವಧೂ-ವರ ಅನ್ವೇಷಣಾ ಸಮಾವೇಶವು ಇತ್ತೀಚಿಗೆ ಮಣ್ಣಗುಡ್ಡ – ಗಾಂಧಿನಗರದಲ್ಲಿರುವ ದೇವಾಡಿಗ ಸಮಾಜ ಭವನದಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀ ವಾಸು ದೇವಾಡಿಗ ಅವರು, ಸಂಘವು ಸಾಮಾಜಿಕ ಜನೋಪಯೋಗಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿದರೆ ಸಮಾಜ ಬಾಂಧವರು ಸಂಘದ ಸಂಪರ್ಕ ಹಾಗೂ ಸಂಬಂಧದಲ್ಲಿರುತ್ತಾರೆ. ಇದರಿಂದ ಬಲಿಷ್ಠ ವಾದ ಸಂಗಟನೆಯಾಗುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಡಾ|| ಕೆ. ದೇವರಾಜ್ ನಿರ್ದೇಶಕರು ಎಸ್.ಡಿ.ಎಂ. ಕಾಲೇಜ್ ಇವರು ಮಾತನಾಡಿ , ದೇಶ ವಿದೇಶಗಳಲ್ಲಿ ಉದ್ಯೋಗ ನಿಮಿತ್ತ ವಾಸವಾಗಿರುವ ಸಮಾಜ ಬಾಂಧವರು ಇಂತಹ ಸಮಾವೇಶವನ್ನು ಆಯೋಜಿಸಿದರೆ ಸಾಂಪ್ರದಾಯಿಕವಾಗಿ ಸಂಬಂಧದ ಸಂಪರ್ಕ ಕಲ್ಪಿಸುವ ಅನುಕೂಲಕರವಾದ ವೇದಿಕೆಯಾಗುತ್ತದೆ ಎಂದರು.

ಮುಂಬೈ ದೇವಾಡಿಗ ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್‌ರವರು ಮಾತನಾಡಿ, ಯುವ ಸಮಾಜ ಬಾಂಧವರು ಮೂಡನಂಬಿಕೆಗೆ ಬಲಿಯಾಗದೆ ವೈಜ್ಞಾನಿಕ ಮನೋಭಾವದಿಂದ ಮಾನವೀಯತೆಯ ನೆಲೆಯಲ್ಲಿ ಮುಂದುವರಿದು ವಿವಾಹವಾಗಬೇಕೆಂದು ಕರೆಯಿತ್ತರು.

ಮುಂಬೈ ದೇವಾಡಿಗ ಸಂಘದ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ ಮಾತನಾಡಿ, ಇಂತಹ ಸಮಾವೇಶಗಳನ್ನು ಆಯೋಜಿಸಿದರೆ, ಮಹಿಳೆಯರ ಸಂಘದ ಚಟುವಟಿಕೆಗಳು ಸಕ್ರಿಯರಾಗುತ್ತಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಅವಿನಾಶ್ ಮೊಸಯಿಕ್ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಪ್ರಕಾಶ್ ಶೇರಿಗಾರ್ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀ ವಾಮನ್ ಮರೋಳಿಯವರು ಮಾತನಾಡಿ, ಸಂಘದ ಜನಪಯೋಗಿ ಕಾರ್ಯಕ್ರಮವನ್ನು ನಿರಂತರವಾಗಿ ಸಮಾಜ ಬಾಂಧವರ ಸಹಕಾರದಲ್ಲಿ ನಡೆಯುತ್ತಿದ್ದು ರಾಜ್ಯಾದ್ಯಾಂತ 300ಕ್ಕಿಂತಲೂ ಮಿಕ್ಕಿ ವಧೂವರರ ನೋಂದಾವಣಿಯಾಗಿರುತ್ತದೆ ಎಂದು ಹೇಳಿದರು.

ಶ್ರೀಮತಿ ವೇಣಿ ಮರೋಳಿಯವರು ಪ್ರಾರ್ಥನೆಗೈದರು. ಸುಭಾಷ್ಚಂದ್ರ ಕಣ್ವತೀರ್ಥ ಅವರು ಪ್ರಾಸ್ತವನೆ ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಗೀತಾ ಕಲ್ಯಾಣ್‌ಪುರ್ ವಂದಿಸಿದರು. ಶ್ರೀನಿವಾಸ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀ ರತ್ನಾಕರ ಬಜ್ಜೋಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ದೇವದಾಸ್, ಕೋಶಾಧಿಕಾರಿ ಶ್ರೀ ಸುರೇಶ್ ನಿಟಿಲಾಪುರ ಹಾಗೂ ಸಂಘಟನಾ ಕಾರ್ಯದರ್ಶಿ ಶ್ರೀ ಯಶವಂತ ದೇವಾಡಿಗ ಕದ್ರಿ ಹಾಗೂ ಯುವ ಸಂಘಟನೆಯ ಅಧ್ಯಕ್ಷಕ್ಷ ಪ್ರಶಾಂತ್ ಎಂ. ಎಚ್. ಉಪಸ್ಥಿತರಿದ್ದರು.

Write A Comment