ಕರಾವಳಿ

ಹರ್ಷ ವಾರದ ಅತಿಥಿ – ಸಂಗೀತ ಕಲಾವಿದ ಗೋಪಾಲಕೃಷ್ಣ ಅಯ್ಯರ್

Pinterest LinkedIn Tumblr

hasha_varada_athiti_1

ಮಂಗಳೂರು,ಅ.07: ಆಕಾಶವಾಣಿಯ ಹರ್ಷ ವಾರದ ಅತಿಥಿಯ 163 ನೇ ಕಾರ್ಯಕ್ರಮದಲ್ಲಿ ಅಕ್ಟೋಬರ್ 12 ರಂದು ಬೆಳಿಗ್ಗೆ 8.50 ಕ್ಕೆ ಹಿರಿಯ ಸಂಗೀತ ಕಲಾವಿದರಾದ ಮಂಗಳೂರಿನ ಶ್ರೀ ಗೋಪಾಲಕೃಷ್ಣ ಅಯ್ಯರ್ ಭಾಗವಹಿಸಲಿದ್ದಾರೆ.

hasha_varada_athiti_2

ಕೇರಳದ ತೃಪಣಿತ್ತುರದಿಂದ ಬಂದ ಇವರು ಮಂಗಳೂರಿನಲ್ಲಿ ಕರ್ನಾಟಕ ಶಾಸ್ರೀಯ ಸಂಗೀತ ಪರಂಪರೆಯ ಗುರುವಾಗಿ ಅನೇಕ ವಿದ್ಯಾರ್ಥಿಗಳನ್ನು ಸಂಗೀತಲೋಕಕ್ಕೆ ನೀಡಿದ್ದಾರೆ. ತೃಪಣಿತ್ತುರ ವಿಶ್ವನಾಥ ಅಯ್ಯರ್ ಅವರಿಂದ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಚೆನ್ನೈ ನ ಕಲಾಕ್ಷೇತ್ರದಲ್ಲಿ ಸಂಗೀತಭ್ಯಾಸ ಮುಂದುವರಿಸಿದರು. ಗಾಯನವಲ್ಲದೆ ಶ್ರೀ ಬಾಲ ಪಣಿಕ್ಕರ ಅವರು ಕೊಳಲು ವಾದನದ ಶಿಕ್ಷಣ ನೀಡಿದರು. ನಂತರ ಅಯ್ಯರ್ ಅವರು ತಮಿಳುನಾಡಿನ ವಿವಿಧ ಸಂಗೀತ ಸಭಾಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಪ್ರಸಿದ್ಧಿ ಪಡೆದರು. ಶ್ರೀಮತಿ ರಾಜಮ್ಮ ಮುಂತಾದವರೊಂದಿಗೆ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. 1950 ರಲ್ಲಿ ಮಂಗಳೂರಿನಲ್ಲಿ ಕಲಾನಿಕೇತನ ಸಂಗೀತ ಶಾಲೆ ಪ್ರಾರಂಭಿಸಿ ಸಂಗೀತ ಶಿಕ್ಷಣ ಪ್ರಾರಂಭಿಸಿದರು. ರಾಜ್ಯೋತ್ಸವ ಸಹಿತ ವಿವಿದ ಪ್ರಶಸ್ತಿ ಪಡೆದ ಇವರು ತಮ್ಮ ಜೀವನದ ಅನುಭವಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇವರನ್ನು ಕಾರ್ಯಕ್ರಮ  ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಶ್ರಿ ಕೆ.ಎಲ್. ಕುಂಡಂತಾಯ ಭಾಗವಹಿಸಲಿದ್ದಾರೆ.

Write A Comment