ಅಂತರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ; ಮಲೇಶ್ಯನ್ ಸಿಖ್ಖರಿಂದ ದೂರು

Pinterest LinkedIn Tumblr

facebook33

ಕೌಲಾಲಂಪುರ, ಅ.4: ಸಿಖ್ ಧಾರ್ಮಿಕ ವ್ಯಕ್ತಿಯೊಬ್ಬರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯೊಂದನ್ನು ಪ್ರಕಟಿಸಿರುವನೆನ್ನಲಾದ ಫೇಸ್‌ಬುಕ್ ಬಳಕೆದಾರನೋರ್ವನ ವಿರುದ್ಧ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರು ಸಲ್ಲಿಸಿರುವ ದೂರಿಗೆ ಸಂಬಂಧಿಸಿ ಮಲೇಶ್ಯ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿಯೊಂದು ತಿಳಿಸಿದೆ.

ಫೇಸ್‌ಬುಕ್‌ನಲ್ಲಿ ನೀಡಿರುವ ಹೇಳಿಕೆಯು ‘ಕೀಳು ಅಭಿರುಚಿಯದ್ದಾಗಿದೆ ಹಾಗೂ ಅದು ಅವಮಾನಕರವಾಗಿದೆ’ ಮತ್ತು ಫೇಸ್‌ಬುಕ್ ಬಳಕೆದಾರನು ಈ ರೀತಿಯ ವಿವೇಚನಾರಹಿತ ಹೇಳಿಕೆಯನ್ನು ನೀಡಬಾರದಾಗಿತ್ತು ಎಂದು ಸಿಖ್ ಸಮುದಾಯದ ಪರ ವಕೀಲ ಗುರುಮುಖ್ ಸಿಂಗ್ ದೂರಿನಲ್ಲಿ ವಿವರಿಸಿದ್ದಾರೆ.

‘‘ನಮ್ಮದು ಶಾಂತಿಯುತ ಧರ್ಮವಾಗಿದೆ ಮತ್ತು ಇತರ ಜನಾಂಗಗಳು ಹಾಗೂ ಧರ್ಮದವರೊಂದಿಗೆ ನಾವು ಸಾಮರಸ್ಯದಿಂದ ಬದುಕುತ್ತಿದ್ದೇವೆ. ಆದರೆ ಇತರರು ನಮ್ಮನ್ನು ಕೀಳಾಗಿ ಕಾಣಲು ನಾವು ಅವಕಾಶ ಕೊಡಲಾರೆವು’’ ಎಂದವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ‘‘ಮಲೇಶ್ಯವು ಒಂದು ಶಾಂತಿಯುತ ಹಾಗೂ ಸಾಮರಸ್ಯದ ರಾಷ್ಟ್ರವಾಗಿದೆ. ನಾವು ಹಲವು ವಷರ್ಗಳಿಂದ ಒಬ್ಬರನ್ನೊಬ್ಬರು ಗೌರವಿಸುತ್ತಲೇ ಬೆಳೆದಿದ್ದೇವೆ ಮತ್ತು ಈಗಲೂ ಕೆಲವು ವ್ಯಕ್ತಿಗಳು ಇಂತಹ ಅವಹೇಳನಕಾರಿ ಹಾಗೂ ಅಪಮಾನಕರ ಹೇಳಿಕೆಗಳನ್ನು ನೀಡುತ್ತಿರುವುದು ಆಘಾತವನ್ನುಂಟು ಮಾಡಿದೆ’’ ಎಂದು ಮಲೇಶ್ಯ ಸಿಖ್ ಮೂವ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಸಿಂಗ್ ಗಿಲ್ ಹೇಳಿದ್ದಾರೆ.

Write A Comment