ಮಂಗಳೂರು, ಸೆಪ್ಟೆಂಬರ್.25 :ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ನ ಅಂಗವಾಗಿರುವ ಮಂಗಳೂರಿನ ಕೆಎಂಸಿ ಹಾಸ್ಪಿಟಲ್ಸ್ ವತಿಯಿಂದ ವಿಶ್ವಹೃದಯ ದಿನ ಆಚರಿಸಲಾಗುತ್ತಿದ್ದು, ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಸೆ. 28ರಂದು ಹೃದಯದ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು ಮಂಗಳೂರು ಕೆ.ಎಂ.ಸಿ. ‘ಹೃದಯ ದಿನದ ಓಟ’ ಕಾರ್ಯಕ್ರಮವನ್ನು ಅಯೋಜಿಸಿದೆ. ಪ್ರಸಕ್ತ ವರ್ಷ ಕೆಎಂಸಿ ಹಾಸ್ಪಿಟಲ್ ಹೃದಯ ದಿನದ ಓಟವನ್ನು ಸತತ ಹತ್ತನೇ ವರ್ಷ ಆಯೋಜಿಸುತ್ತಿದ್ದು, ಓಟದ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದು ಕೆ.ಎಂ.ಸಿ. ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ| ಆನಂದ್ ವೇಣುಗೋಪಾಲ್ ತಿಳಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 28 ರಂದು ಬೆಳಗ್ಗೆ 6.45ಕ್ಕೆ ಟಿ.ಎಂ.ಎ. ಪೈ ಇಂಟರ್ನ್ಯಾಶನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಹೃದಯ ದಿನದ ಉದ್ಘಾಟನೆ ಮತ್ತು ವಿಶ್ವಹೃದಯ ದಿನ ಓಟಕ್ಕೆ ಚಾಲನೆ ನೀಡಲಾಗುವುದು ಬೆಳಗ್ಗೆ 6:45ಕ್ಕೆ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ನಿಂದ ಆರಂಭಗೊಂಡು ಎಂ.ಜಿ. ರೋಡ್, ಪಿ.ವಿ.ಎಸ್. ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ತಲುಪಿ ಬೆಳಿಗ್ಗೆ 9 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಓಟದಲ್ಲಿ ಪಾಲ್ಗೊಳ್ಳುವವರಿಗೆ ಅತ್ಯುತ್ತಮ ಕಾರ್ಪೊರೆಟ್ ಭಾಗವಹಿಸುವಿಕೆ, ಅತ್ಯುತ್ತಮ ಸಾಂಸ್ಥಿಕ ಭಾಗವಹಿಸುವಿಕೆ, ಅತ್ಯುತ್ತಮ ಮಾಹಿತಿ ಫಲಕ, ಅತ್ಯುತ್ತಮ ಘೋಷಣೆ ಕೂಗುವುದು, ಅತ್ಯಂತ ಚಿಕ್ಕ ವಯಸ್ಸಿನ ಹಾಗೂ ಹಿರಿಯ ವಯಸ್ಸಿನ ಓಟಗಾರರಿಗೆ ಬಹುಮಾನ/ ಪ್ರಶಸ್ತಿ ನೀಡಲಾಗುವುದು ಎಂದು ಅವರು ವಿವರಿಸಿದರು.
ಮಂಗಳೂರಿನ ಕೆಎಂಸಿ ಹಾಸ್ಪಿಟಲ್ನ ಹೃದಯರೋಗ ಶಸ್ತ್ರಚಿಕಿತ್ಸಾತಜ್ಞರಾದಡಾ|| ನರಸಿಂಹ ಪೈ ಅವರು ಸ್ವಾಗತಿಸಿದರು. ಈ ಉಪಕ್ರಮಗಳ ಮೂಲಕ ಹಲವಾರು ಹೃದಯ ಸಮಸ್ಯೆ ಕುರಿತಂತೆ ಜನರಲ್ಲಿ ಜಾಗೃತಿ ಯನ್ನು ಹೆಚ್ಚಿಸುವುದಲ್ಲದೆಅವರಿಗೆ ಶಿಕ್ಷಣ ಮತ್ತು ಮಾಹಿತಿ ನೀಡುವಯೋಜನೆಯನ್ನು ಕೆಎಂಸಿ ಆಸ್ಪತ್ರೆ ಹೊಂದಿದ್ದು ಇದರಿಂದ ಜನರು ಅಪಾಯ ರಹಿತ ಆರೋಗ್ಯ ಕರ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಎಂಸಿ ಹಾಸ್ಪಿಟಲ್ಸ್ನ ವೈದ್ಯಕೀಯಅಧೀಕ್ಷಕರು ಮಾತನಾಡಿ, ಪ್ರಸಕ್ತ ವರ್ಷ ನಾವು ಅತ್ಯಂತ ಬೃಹತ್ ಪ್ರಮಾಣದಲ್ಲಿ ಹ್ಯೂಮೆನ್ ಹಾರ್ಟ್ ಬೀಟ್ ಸಿಮ್ಯುಲೇಷನ್ನ ಮೂಲಕ ಏಷ್ಯಾ ಬುಕ್ಆಫ್ರೆಕಾರ್ಡ್ಸ್ ಸೇರಲುಯತ್ನಿಸಲಿದ್ದೇವೆ. ಈ ಪ್ರಯತ್ನದ ನಂತರದರ್ಯಾಲಿಗೆಟಿಎಂಎ ಪೈ ಕನ್ವೆನ್ಷನ್ ಸೆಂಟರ್ನಿಂದ ಚಾಲನೆ ನೀಡಲಾಗುವುದು ನಂತರಓಟವು, ಎಂಜಿರಸ್ತೆ, ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದಲ್ಲಿಯಕೆಎಂಸಿ ಆಸ್ಪತ್ರೆತಲುಪಲಿದೆ. ಈ ಓಟದ ಮೂಲಕ ಭಾಗವಹಿಸಿದವರಿಗೆ ಹಲವಾರು ಬಹುಮಾನಗಳಿದ್ದು ಇವುಗಳಲ್ಲಿ ಅತ್ಯುತ್ತಮಕಾರ್ಪೋರೇಟ್ ಭಾಗವಹಿಸುವಿಕೆ, ಅತ್ಯುತ್ತಮ ಸಾಂಸ್ಥಿಕ ಭಾಗವಹಿಸುವಿಕೆ, ಅತ್ಯುತ್ತಮ ಮಾಹಿತಿ ಫಲಕ, ಅತ್ಯುತ್ತಮಘೋಷಣೆಕೂಗುವುದು, ಅತ್ಯಂತಚಿಕ್ಕ ವಯಸ್ಸಿನ ಹಾಗೂ ಹಿರಿಯ ವಯಸ್ಸಿನ ಓಟಗಾರರಿಗೆ ಪ್ರಶಸ್ತಿಗಳು ಸೇರಿವೆಎಂದರು.
ಕೆಎಂಸಿ ಹಾಸ್ಪಿಟಲ್ಸ್ನ ಘಟಕದ ಮುಖ್ಯಸ್ಥ ಸಗೀರ್ ಸಿದ್ಧಿಕಿ ಅವರು ಮಾತನಾಡಿ, ದಕ್ಷಿಣ ಭಾರತದಖ್ಯಾತ ನಟಿ ಶರ್ಮಿಳಾ ಮಾಂಡ್ರೆಅವರು ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿರಲಿದ್ದಾರೆ. ಅಂತಾರಾಷ್ಟ್ರೀಯಕ್ರೀಡಾಪಟುಕ್ಲಿಫೋರ್ಡ್ಜೋಶುವಅವರು ವಿಶ್ವ ಹೃದಯ ದಿನ ಓಟ ೨೦೧೪ರ ಜ್ಯೋತಿಯನ್ನು ಹಿಡಿದುಓಡಲಿದ್ದಾರೆ. ಮಣಿಪಾಲ್ ಸಮೂಹ ಮತ್ತು ನಗರದಇತರೆಗಣ್ಯರುಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಮಂಗಳೂರಿನ ಕೆಎಂಸಿ ಹಾಸ್ಪಿಟಲ್ಸ್ನ ಹಿರಿಯ ಹೃದಯ ಶಸ್ತ್ರಚಿಕಿತ್ಸಾತಜ್ಞರಾದಡಾ|| ಪದ್ಮನಾಭಕಾಮತ್ಅವರು ಮಾತನಾಡಿ, ವಿಶೇಷ ಹೃದಯತಪಾಸಣೆ ಪ್ಯಾಕೇಜ್ ಮತ್ತು ಪ್ಯಾಕೇಜ್ನಲ್ಲಿನ ಪ್ರತಿ ಪರೀಕ್ಷೆಗಳ ಪ್ರಾಮುಖ್ಯತೆಕುರಿತು ವಿವರಿಸಿದರಲ್ಲದೆ ಈ ಪ್ಯಾಕೇಜ್ಅನ್ನು ವಿಶ್ವಹೃದಯದಿನದ ಹಿನ್ನೆಲೆಯಲ್ಲಿ ಆರಂಭಿಸಲಾಗಿದ್ದು ರಿಯಾಯಿತಿಯದರ ೧೮೦೦ ರೂ.ಗಳಲ್ಲಿ(೨೮೦೦ ರೂ. ಸಾಮಾನ್ಯದರ) ನೀಡಲಾಗುತ್ತಿದೆ.ಅಲ್ಲದೆ ಹಿರಿಯ ನಾಗರಿಕರಿಗೆ ವಿಶೇಷ ದರ ೧೫೦೦ ರೂ.ಗಳಲ್ಲಿ ನೀಡಲಾಗುತ್ತಿರುವ ಪ್ಯಾಕೇಜ್ ೩೧,ಅಕ್ಟೋಬರ್ ೨೦೧೪ರವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಚಿಕಿತ್ಸೆಗಳಾದ ಏಂಜಿಯೋಗ್ರಾಮ್, ಏಂಜಿಯೋಪ್ಲಾಸ್ಟಿ ಮತ್ತು ಸಿಎಬಿಜಿ ಕ್ರಮಗಳ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿದರದಲ್ಲಿಚಿಕಿತ್ಸೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯಕ್ರೀಡಾಪಟು ಶ್ರೀ ಕ್ಲಿಫರ್ಡ್ಜೋಶುವಾ ಅವರು ವಿಶ್ವ ಹೃದಯ ದಿನ ಓಟ 2014ರ ಟೀ ಶರ್ಟ್ ಅನಾವರಣಗೊಳಿಸಿದರು.
ಸೆಪ್ಟೆಂಬರ್ 20, 2014ರಂದು ವಿಶ್ವ ಹೃದಯ ದಿನದ ಅಂಗವಾಗಿ ಶಾಲಾ ಮಕ್ಕಳಿಗಾಗಿ ಚಿತ್ರರಚನಾ ಸ್ಪರ್ಧೆಯನ್ನು ಕೆಎಂಸಿ ಹಾಸ್ಪಿಟಲ್ಸ್ ಅತ್ತಾವರದಲ್ಲಿ ನಡೆಸಲಾಯಿತು. ನಗರದ 363ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇವರಲ್ಲಿಆಸ್ಪತ್ರೆಗೆದಾಖಲಾಗಿರುವ ೩೫ ಮಕ್ಕಳು ಸಹ ಸೇರಿದ್ದರು. ಸ್ಪರ್ಧೆಯಲ್ಲಿ ವಿಜೇತರಿಗೆ ಸಮಾರೋಪಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು.
ಡಾ| ನರಸಿಂಹ ಪೈ, ಡಾ| ಆರ್.ಎಲ್. ಕಾಮತ್, ಡಾ| ಸುಜಿತ್ ಸುವರ್ಣ, ಡಾ| ಮನೀಶ್ ರೈ, ಎಂ.ಆರ್.ಪಿ.ಎಲ್. ಸಂಸ್ಥೆಯ ಡಿಜಿಎಂ ಲಕ್ಷ್ಮೀ ಕುಮಾರನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












