ಕರಾವಳಿ

ಪುರಭವನ ನವೀಕರಣಕ್ಕೆ ಚಾಲನೆ

Pinterest LinkedIn Tumblr

town_hall_renovation_1

ಮಂಗಳೂರು ಸೆಪ್ಟೆಂಬರ್17 :ಮಂಗಳೂರು ಪುರಭವನಕ್ಕೆ 50  ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪುರಭವನದ ಆಧುನೀಕರಣ ಮತ್ತು ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು.

town_hall_renovation_2

ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಪುರಭವನಕ್ಕೆ ಸಂಪೂರ್ಣ ಎ.ಸಿ.ಅಳವಡಿಕೆ, ನೆಲಹಾಸು, ಹೊರಭಾಗದಲ್ಲಿ ಗ್ರಾನೈಟ್ ಅಳವಡಿಕೆ, ಆಕರ್ಷಕ ಬಾಗಿಲು , ವಿ‌ಐಪಿ ಕೊಠಡಿ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು,ಡಿಸೆಂಬರ್ 29 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

town_hall_renovation_3

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೋ,ಉಪಮೇಯರ್ ಕವಿತಾ,ಅಯುಕ್ತ ಗೋಕುಲದಾಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Write A Comment