ಗಲ್ಫ್

ಶಾರ್ಜಾ: ಭಾರತೀಯ ಪ್ರವಾಸಿಗರನ್ನು ಸೆಳೆಯಲು ಅಭಿಯಾನ

Pinterest LinkedIn Tumblr

sharjah1

ಶಾರ್ಜಾ, ಸೆ.15: ಯುರೋಪ್‌ನಲ್ಲಿ ನಡೆಸಿರುವ ತನ್ನ ಅಭಿಯಾನವು ಯಶಸ್ವಿಯಾದ ಬಳಿಕ ಇದೀಗ ಯುನೈಟೆಡ್ ಎಮಿರೇಟ್ಸ್‌ನ ಶಾರ್ಜಾವು ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 15ರಿಂದ 22ರವರೆಗೆ ಭಾರತ ಪರ ರೋಡ್‌ಶೋಗಳನ್ನು ಹಮ್ಮಿಕೊಂಡಿದೆ.

ಭಾರತದಲ್ಲಿ ನಡೆಯಲಿರುವ 2014ರ ಈ ಪ್ರದರ್ಶನವನ್ನು ಶಾರ್ಜಾ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಏರ್ ಅರೇಬಿಯ ಏರ್‌ಲೈನ್ ಹಾಗೂ ಶಾರ್ಜಾದ ಹೋಟೆಲ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಮುಂಬೈ, ಹೊಸದಿಲ್ಲಿ, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೋಡ್‌ಶೋಗಳು ನಡೆಯಲಿವೆ. ಭಾರತವು ಶಾರ್ಜಾಕ್ಕೆ ಒಂದು ನಿರ್ಣಾಯಕ ಹಾಗೂ ಭರವಸೆಯ ಪ್ರವಾಸೋದ್ಯಮ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಶಾರ್ಜಾದ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸುಮಾರು 1,23,010ಕ್ಕೂ ಅಧಿಕ ಭಾರತೀಯ ಪ್ರವಾಸಿಗರು ಶಾರ್ಜಾಕ್ಕೆ ಆಗಮಿಸಿದ್ದು, ಈ ಹಿಂದಿನ ವರ್ಷಕ್ಕಿಂತ ಅದು ಶೇಕಡಾ 41ರಷ್ಟು ಅಧಿಕವಾಗಿದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯು ಇನ್ನಷ್ಟು ಅಧಿಕಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

Write A Comment